ಗದ್ರಟಗಿಯಲ್ಲಿ ಸಾಮೂಹಿಕ ವಿವಾಹ

30SND-05
Published on

ಸಿಂಧನೂರು: ತಾಲೂಕಿನ ಗದ್ರಟಗಿ ಗ್ರಾಮದ ಆರಾಧ್ಯ ದೇವತೆ ಶ್ರೀ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ 18 ಜೋಡಿ ಸಾಮೂಹಿಕ ವಿವಾಹ ನಡೆಯಿತು.

ಬೆಳಗ್ಗೆ ದೇವಿಗೆ ಉಡಿ ತುಂಬಿ, ಧ್ವಜಾರೋಹಣ, ಕಳಸಾರೋಹಣ ನೆರವೇರಿಸಲಾಯಿತು. ಬಳಿಕ ಶ್ರೀಮಾತೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಶ್ರೀದೇವಿಯ ಪಲಕ್ಕಿ ಸೇವೆ ವಿಜೃಂಭಣೆಯಿಂದ ಜರುಗಿತು. ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕರಿಬಸಯ್ಯಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶ್ರೀ ಚೌಡೇಶ್ವರ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಬಪ್ಪೂರ, ಕುರುಕುಂದ, ತಿಡಿಗೋಳ, ಉಪ್ಪಲದೊಡ್ಡಿ, ಮಾಟೂರು, ಹೊಗರನಾಳ, ಗುಡಿಹಾಳ, ಗುಂಡ ಇತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net