ನಿಧಿ ಸಮರ್ಪಣೆ ಅಭಿಯಾನಕ್ಕೆ ಕೈಜೋಡಿಸೋಣ - ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಹ್ವಾನ

150121 Raichur Ram Mandira Fund Collection
Published on

ಸಿಂಧನೂರು: ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ಈ ಪವಿತ್ರ ಕೆಲಸಕ್ಕೆ ಕಂಕಣಬದ್ಧರಾಗೋಣ ಎಂದು ಮೂರುಮೈಲ್ ಕ್ಯಾಂಪ್‌ನ ಕರಿಬಸವ ನಗರದ ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶ್ರೀರಾಮ ಮಂದಿರದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಏರ್ಪಡಿಸಿದ್ದ ಮನೆ ಮನ ಸಂಪರ್ಕದ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಮಠದಿಂದ 1008 ರೂ. ನಿಧಿ ನೀಡಿರುವುದಾಗಿ ತಿಳಿಸಿದರು.

ಟ್ರಸ್ಟ್ ಸದಸ್ಯ ಪ್ರಹ್ಲಾದ ಕೆಂಗಲ್ ಪ್ರಾಸ್ತಾವಿಕ ಮಾತನಾಡಿ, ಪ್ರೀತಿ-ವಿಶ್ವಾಸದಿಂದ ನಿಧಿ ಪಡೆಯುವ ಉದ್ದೇಶ ಹೊಂದಿದ್ದೇವೆ. ಜ.17ರಂದು ನಗರದಲ್ಲಿ ಏಕಕಾಲಕ್ಕೆ ಎಲ್ಲ ವಾರ್ಡ್‌ಗಳಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದರು.

ಬ್ರಾಹ್ಮಣ ಸಮುದಾಯ ಹಿರಿಯ ಮುಖಂಡ ರಾಮಕೃಷ್ಣಾಚಾರ್ಯ ಗೋನ್ವಾರ ಮಾತನಾಡಿದರು. ಉದ್ಯಮಿ ರಾಜೇಶ ಹಿರೇಮಠರು 1,01,008 ರೂ. ಚೆಕ್ ನೀಡಿದರು. ಜಿಪಂ ಸದಸ್ಯರಾದ ಅಮರೇಗೌಡ ವಿರೂಪಾಪುರ, ಎನ್.ಶಿವನಗೌಡ ಗೊರೇಬಾಳ, ಮುಖಂಡರಾದ ಕೊಲ್ಲಾ ಶೇಷಗಿರಿರಾವು, ಮಧ್ವರಾಜ್ ಆಚಾರ್ಯ, ಅಮರಯ್ಯಸ್ವಾಮಿ ಅಲಬನೂರು, ಬಸವರಾಜ ಬಂಗಾರ ಶೆಟ್ಟರ್, ನಿರುಪಾದಿ ಜೋಳದರಾಶಿ, ಹನುಮೇಶ ವಾಲೇಕಾರ, ಪಂಪಯ್ಯಸ್ವಾಮಿ ಸಾಲಿಮಠ, ಮಲ್ಲಿಕಾರ್ಜುನ ಜೀನೂರು, ರೇಣುಕಪ್ಪ ಬಸಾಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net