

ಸಿಂಧನೂರು: ನಗರದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯ ರಜತ ಮಹೋತ್ಸವ ಪ್ರಯುಕ್ತ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿ ಸಹಯೋಗದಲ್ಲಿ ಜ.9 ರಿಂದ ಜ.12ರವರೆಗೆ ಕ್ರೀಡಾ ಉತ್ಸವ ಹಾಗೂ ಸಹಕಾರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ದೊಡ್ಡಬಸವರಾಜ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.9 ರಂದು ಸರ್ಕಾರಿ ಪದವಿ ಮಹಾವಿದ್ಯಾಲಯ ಮೈದಾನದಲ್ಲಿ ಬೆಳಗ್ಗೆ ಕ್ರೀಡಾ ಉತ್ಸವ ನಡೆಯಲಿದೆ. ಜ.10 ಮತ್ತು 11 ರಂದು ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನಾ ಕಾರ್ಯಕ್ರಮ ಇದ್ದು, ಎ ಗುಂಪಿನ ಪಂದ್ಯಗಳು ತಾಲೂಕು ಕ್ರೀಡಾಂಗಣದಲ್ಲಿ, ಬಿ ಗುಂಪಿನ ಪಂದ್ಯಗಳು ಸರ್ಕಾರಿ ಮಹಾವಿದ್ಯಾಲಯದ ಮೈದಾನದಲ್ಲಿ ಸಿ ಗುಂಪಿನ ಪಂದ್ಯಗಳು ಸರ್ಕಾರಿ ಜೂನಿಯರ್ ಕಾಲೇಜು ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ನಡೆಯಲಿವೆ. ಜ.12 ರಂದು ತಹಸೀಲ್ದಾರ್ ಕಚೇರಿಯಿಂದ ಸತ್ಯಾಗಾರ್ಡನ್‌ವರೆಗೆ ಸಹಕಾರ ಜಾಥಾ ನಡೆಯಲಿದ್ದು, ನಂತರ ಸತ್ಯಗಾರ್ಡನ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜೇಗೌಡ, ಶಾಸಕ ಹಂಪನಗೌಡ ಬಾದರ್ಲಿ, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಸಹಕಾರಿ ರಾಜ್ಯ ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ನಿರ್ದೇಶಕ ಬಿ.ಎಚ್.ಕೃಷ್ಣಾರೆಡ್ಡಿ ಇತರರು ಪಾಲ್ಗೊಳ್ಳುವರು ಎಂದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಅಮರೇಗೌಡ ನಕ್ಕುಂದಿ, ಪ್ರಮುಖರಾದ ನಾಗರತ್ನಮ್ಮ ಪಾಟೀಲ್, ಶರಣೇಗೌಡ ಗದ್ರಟಗಿ, ಚುಕ್ಕಿ ಸೂಗಪ್ಪ ಸಾಹುಕಾರ, ನಲ್ಲಾ ವೆಂಕಟೇಶ್ವರ ರಾವ್, ಮಲ್ಲನಗೌಡ ನಕ್ಕುಂದಿ, ಎಂ.ಪದ್ಮನಾಯ್ಡು, ಗುಂಡಪ್ಪ ಬಳಿಗಾರ, ಬಸವರಾಜ ಪಾಟೀಲ ಡೋಣಮರಡಿ, ಗ್ಯಾನಪ್ಪ ಕನ್ನಂಪೇಟೆ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಹುಸೇನಬಾಷಾ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಟರಾಜ ಇತರರು ಇದ್ದರು.