ನಗರಸಭೆ ಅನುದಾನದಲ್ಲಿ ಮಾದರಿ ನಗರ ಸಾಧ್ಯ

Hampanagouda Badarli 6x4 Web - Copy
Published on

ಸಿಂಧನೂರು: ನಗರಸಭೆ ಅನುದಾನದಲ್ಲಿ ಮಾದರಿ ನಗರವಾಗಿಸಲು ಅವಕಾಶವಿದ್ದು, ಅಧ್ಯಕ್ಷರೊಂದಿಗೆ ಸದಸ್ಯರು ಕೈಜೋಡಿಸಬೇಕೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಪೊಲೀಸ್ ಕಾಲನಿಯಲ್ಲಿ ಭಾನುವಾರ ಸಾರ್ವಜನಿಕರೊಂದಿಗೆ ಚರ್ಚಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಬಹುತೇಕ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಉದ್ಯಾನಗಳ ಅಭಿವೃದ್ಧಿ ಹಾಗೂ ಜನರಿಗೆ ಶುದ್ಧ ಕುಡಿವ ನೀರಿನ ಸೌಕರ್ಯ ಒದಗಿಸುವುದು ಅಗತ್ಯವಾಗಿದೆ ಎಂದರು.

ಜೆಡಿಎಸ್‌ನ ಅಮಿನ್, ಇಸ್ಮಾಯಿಲ್ ಸೋಹೆಲ್, ದಾವೂದ್, ಮೀರಾ ಹಾಗೂ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು. ನಗರಸಭೆ ಸದಸ್ಯರಾದ ಎಚ್.ಬಾಷಾ, ಶೇಖರಪ್ಪ ಗಿಣಿವಾರ, ಶರಣಪ್ಪ ಉಪ್ಪಲದೊಡ್ಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ.ಅನಿಲಕುಮಾರ, ಪ್ರಮುಖರಾದ ಎಚ್.ರಾಮನಗೌಡ, ಖಾಜಿ ಮಲ್ಲಿಕ್, ನಿರುಪಾದಿ ಗುಡಿಹಾಳ, ಸತ್ಯನಗೌಡ, ರಾಜು ದತ್ತುರಾವ, ಅಸ್ಲಾಂಪಾಷಾ, ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net