

ಸಿಂಧನೂರು: ಅಂಗನವಾಡಿ ಮೇಲ್ವಿಚಾರಕಿ ರುಕ್ಮಿಣಿಯವರನ್ನು ಕರ್ತವ್ಯದಲ್ಲಿ ಮುಂದುವರಿಸದಿರಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಥಮ ದರ್ಜೆ ಸಹಾಯಕ ಶರಣಬಸವಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕನಕಗಿರಿ ತಾಲೂಕಿನಿಂದ ರುಕ್ಮಿಣಿ ಅವರು ವರ್ಗಾವಣೆಯಾಗಿ ಬಂದಿದ್ದಾರೆ. ರುಕ್ಮಿಣಿ ಅವರು ಸಿಂಧನೂರು ತಾಲೂಕಿನ ತುರ್ವಿಹಾಳ, ಸಾಲಗುಂದಾ, ಪಾಪಾರಾವ್‌ಕ್ಯಾಂಪ್‌ನಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುವ ವೇಳೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳ ಲಂಚ ಕೊಡುವಂತೆ ಪೀಡಿಸುತ್ತಿದ್ದರು. ಆಹಾರವನ್ನು ಕೇಂದ್ರಗಳಿಂದ ಒತ್ತಾಯಪೂರ್ವಕವಾಗಿ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಲವಾರು ಬಾರಿ ಕಾರ್ಯಕರ್ತೆಯರು, ಇತರ ಮೇಲ್ವಿಚಾರಕಿಯರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ಅನಾವಶ್ಯವಾಗಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಚೇರಿಯ ಘನತೆಗೆ ಧಕ್ಕೆ ತಂದಿದ್ದಾರೆ. ಅವರ ದುರ್ವರ್ತನೆ ಮತ್ತು ಅವ್ಯವಹಾರ ಕುರಿತು ಇಲಾಖೆಯಲ್ಲಿ ದಾಖಲೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ಫೆಡರೇಷನ್ ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ತಾಲೂಕು ಘಟಕದ ಅಧ್ಯಕೆ ್ಷ ಗಿರಿಜಮ್ಮ, ಕಾರ್ಯದರ್ಶಿ ಆದಿಲಕ್ಷ್ಮೀ, ತುರ್ವಿಹಾಳ ಯೋಜನೆಯ ನಾಗರತ್ನಾ, ಕವಿತಾ ಇದ್ದರು.