ರೈತರ ಏಳಿಗೆಗೆ ಸಹಕಾರಿ ಸಂಘಗಳ ಪಾತ್ರ ಅನನ್ಯ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ವ್ಯಾಖ್ಯಾನ

281122 Budihala Inauguration of warehouse
ಬೂದಿಹಾಳದಲ್ಲಿ ಭಾನುವಾರ ಗೋದಾಮು ಉದ್ಘಾಟನೆ ಹಾಗೂ ಸಿದ್ದನಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉದ್ಘಾಟಿಸಿದರು.
Published on

ಸಿಂಧನೂರು: ಗ್ರಾಮೀಣ ರೈತರ ಏಳಿಗೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಅನನ್ಯ ಎಂದು ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

ಬೂದಿಹಾಳದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಲಾದ ಗೋದಾಮು ಉದ್ಘಾಟನೆ ಹಾಗೂ ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರಿಗೆ ಸಾಲ ನೀಡುವ ಜತೆಗೆ ಪೂರಕ ಸೇವೆ ಒದಗಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ. ಸಹಕಾರಿ ಕ್ಷೇತ್ರವೂ ದುಡಿಯುವ ಎಲ್ಲ ವರ್ಗದವರಿಗೆ ಕಡಿಮೆ ಬಡ್ಡಿಯಲ್ಲಿ ನೆರವು ನೀಡುವ ಶಕ್ತಿ ಹೊಂದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಮಾಲಿ ಪಾಟೀಲ್ ಮಾತನಾಡಿ, ಸಹಕಾರಿ ಕ್ಷೇತ್ರವೂ ಇಂದು ಉತ್ತಮವಾಗಿ ಬೆಳೆಯುತ್ತಿದೆ. ರೈತರು ರಿಯಾಯತಿ ಬಡ್ಡಿಯಲ್ಲಿ ಸಾಲ ಪಡೆದ ನಂತರ ಸಕಾಲದಲ್ಲಿ ಮರುಪಾವತಿಸುವ ಮೂಲಕ ಈ ಕ್ಷೇತ್ರವನ್ನು ಸದೃಢಗೊಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net