ಕಳಪೆ ಕಾಮಗಾರಿಗೆ ಮತ್ಯಾವ ದಾಖಲೆ ಬೇಕು; ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಪ್ರಶ್ನೆ

25112022 Sindhanoor road repair
Published on

ಸಿಂಧನೂರು: ನಗರದ ಗಂಗಾವತಿ ಸಂಪರ್ಕ ರಸ್ತೆಯಲ್ಲಿ ಸಿಸಿ ರಸ್ತೆ ಬಿರುಕು ಬಿಟ್ಟಿರುವ ಸ್ಥಳಕ್ಕೆ ಕಾಂಗ್ರೆಸ್ ಪ್ರಮುಖರು ಶುಕ್ರವಾರ ಭೇಟಿ ನೀಡಿದ್ದರು.

ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ಅಭಿವೃದ್ಧಿ ಮಾಡಿದ್ದೇನೆಂದು ಹೇಳುವ ಶಾಸಕ ವೆಂಕಟರಾವ ನಾಡಗೌಡ, ಈ ಕಳಪೆ ಕಾಮಗಾರಿ ನೋಡಲಿ. ಅವರ ಸಂಬಂಧಿಕರೇ ಈ ರಸ್ತೆ ಕಾಮಗಾರಿಯನ್ನು ಕಳಪೆ ಮಾಡಿದ್ದಾರೆ. ಸಂಬಂಧಿಕರು ಯಾರೂ ಗುತ್ತಿಗೆ ಕೆಲಸ ಮಾಡಲ್ಲ ಎಂದು ಶಾಸಕ ಹೇಳುತ್ತಾರೆ. ಹಾಗಾದರೆ ಬಿರುಕು ಬಿಟ್ಟಿರುವ ಸಿಸಿ ರಸ್ತೆ ನಿರ್ಮಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಕುನ್ನಟಗಿ ಪಿಕಪ್ ಡ್ಯಾಂ ಕಳಪೆ ಕಾಮಗಾರಿಯಿಂದ ಕೊಚ್ಚಿ ಹೋಗಿತ್ತು. ಶಾಸಕ ನಾಡಗೌಡ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದಕ್ಕಿಂತ ದೊಡ್ಡ ದಾಖಲೆ ಬೇಕಾ ಎಂದು ಬಾಬುಗೌಡ ಬಾದರ್ಲಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net