

ಸಿಂಧನೂರು: ತಾಲೂಕಿನ ಜನತೆಗೆ ಹೊಸತನ ನೀಡಬೇಕು. ಭತ್ತದ ನಾಡಿನಲ್ಲಿ ದಸರಾ ಉತ್ಸವ ನಡೆಯಬೇಕೆಂಬ ಕಲ್ಪನೆ ಹೊತ್ತಿದ್ದೆ. ನನ್ನ ಕಲ್ಪನೆಗೆ ಈಗ ಸರ್ಕಾರ ಹಾಗೂ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದಲ್ಲಿ ಅ.4 ರಿಂದ 14 ರವರಗೆ ನಡೆಯುವ ದಸರಾ ಉತ್ಸವಕ್ಕೆ ಸಿಎಂ ಹಾಗೂ ಡಿಸಿಎಂ ಆಗಮನ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಸಭೆ, ನೂತನ ಎಂಪಿ, ಎಂಎಲ್‌ಸಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಈ ಕಾರ್ಯಕ್ರಮ ಇಡೀ ಕಲ್ಯಾಣ ಕರ್ನಾಟಕಕ್ಕೆ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅ.4 ರಿಂದ 12 ರವರೆಗೆ ನಡೆಯುವ ಕಾರ್ಯಕ್ರಮಗಳ ಯಶಸ್ಸಿಗೆ ಕೈಜೋಡಿಸಬೇಕೆಂದು ಶಾಸಕ ಬಾದರ್ಲಿ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಅಮರೇಶ, ಎಪಿಎಂಸಿ ಮಾಜಿ ಸದಸ್ಯ ರಾಮನಗೌಡ ಬಸಾಪುರ, ಪ್ರಮುಖರಾದ ಲಿಂಗರಾಜ ಪಾಟೀಲ್ ಹಂಚಿನಾಳ, ಶ್ರೇಣಿಕರಾಜ ಶೇಠ್, ಪಂಪನಗೌಡ ತಾವರಗೇರಾ, ಮುರ್ತುಜಾ ಹುಸೇನ ಇದ್ದರು.