ವೈಜ್ಞಾನಿಕ-ಸಾಂಸ್ಕೃತಿಕ ಚಟುವಟಿಕೆ ಕಲಿಸಿ

snd-1
ಸಿಂಧನೂರಿನ ಸರ್ಕಾರಿ ನೌಕರರ ಭವನದಲ್ಲಿ ಸಮುದಾಯ ಸಂಘಟನೆಯಿಂದ ನಾಟಕೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮುದಾಯದ ಸಂಸ್ಥಾಪಕ ಸದಸ್ಯ ಬಿ.ಲಿಂಗಪ್ಪ, ರಾಜ್ಯ ಕೋಶಾಧ್ಯಕ್ಷ ಎಸ್.ದೇವೇಂದ್ರಗೌಡ, ತಾಲೂಕು ಅಧ್ಯಕ್ಷ ಶರಭಣ್ಣ ನಾಗಲಾಪುರ, ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ ಇತರರಿದ್ದರು.
Published on

ಸಿಂಧನೂರು: ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಸಮುದಾಯ ಸಂಘಟನೆ ಜನ ಚಳವಳಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸಮುದಾಯದ ಸಂಸ್ಥಾಪಕ ಸದಸ್ಯ ಬಿ.ಲಿಂಗಪ್ಪ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಸಮುದಾಯ ಸಂಘಟನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ನಾಟಕೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. 1975ರಲ್ಲಿ ಆರಂಭವಾದ ಸಮುದಾಯ ಸಂಘಟನೆ 50 ವರ್ಷ ಪೂರೈಸಿದೆ.

ಈ ಸಂದರ್ಭದಲ್ಲಿ ಜನರಿಗೆ ವೈಜ್ಞಾನಿಕ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸಿ ಜನಸಮುದಾಯದ ಜತೆಗಿರಬೇಕು. ಸರ್ಕಾರಗಳ ತಪ್ಪುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಮುದಾಯ ಸಂಘಟನೆ ನಿರಂತರವಾಗಿ ಕ್ರಿಯಾಶೀಲವಾಗಿ ಜನರ ನಡುವೆ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಾಜ್ಯ ಕೋಶಾಧ್ಯಕ್ಷ ಎಸ್.ದೇವೇಂದ್ರಗೌಡ ಅವರು, ಸಮುದಾಯದ 50 ವರ್ಷಗಳ ಸಾಧನೆ ಮತ್ತು ಮುಂದೆ ಆಯೋಜಿಸುವ ಕಾರ್ಯಕ್ರಮಗಳ ಕುರಿತು ತಿಳಿಸಿ, ನಾಟಕೋತ್ಸವದ ಲೆಕ್ಕಪತ್ರ ಮಂಡಿಸಿದರು. ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಭಣ್ಣ ನಾಗಲಾಪುರ, ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸ್ವಾಗತ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net