

ಸಿಂಧನೂರು: ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯುಕ್ತರ ನಿರ್ದೇಶನದ ಮೇರೆಗೆ ನಗರ ವ್ಯಾಪ್ತಿಯ ಅನಧಿಕೃತ ವಾಣಿಜ್ಯ ಬ್ಯಾನರ್‌ಗಳನ್ನು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು.
ನಗರದ ಗಾಂಧಿವೃತ್ತ, ಅಶೋಕ ಭವನ, ಬಸವ ವೃತ್ತ, ಗಂಗಾವತಿ ರಸ್ತೆ, ಸುಕಾಲಪೇಟೆ ರಸ್ತೆ ಮತ್ತಿತರೆಡೆ ನಗರಸಭೆ ಪರವಾನಿಗೆ ಇಲ್ಲದೆ ಹಾಕಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಈ ಕುರಿತು ಪೌರಾಯುಕ್ತ ಮಂಜುನಾಥ ಮಾತನಾಡಿ, ಜಿಲ್ಲಾಧಿಕಾರಿ ನಿರ್ದೇಶನದಂತೆ ನಗರದಲ್ಲಿನ ಎಲ್ಲ ವಾಣಿಜ್ಯ ಬ್ಯಾನರ್ ತೆರವುಗೊಳಿಸಲು ನಾಲ್ಕು ತಂಡ ರಚಿಸಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲ ಬ್ಯಾನರ್‌ಗಳನ್ನು ತೆರವುಗೊಳಿಸಿ ಡಿಸಿಗೆ ಮಾಹಿತಿ ನೀಡಲಾಗಿದೆ. ಬ್ಯಾನರ್ ಮುಕ್ತ ನಗರವಾಗಿ ಘೋಷಿಸಲಾಗಿದೆ ಎಂದರು.
ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಬ್ಯಾನರ್ ಹಾಕುವುದಿದ್ದರೆ ನಗರಸಭೆ ಅನುಮತಿ ಜನತೆಗೆ ಬಟ್ಟೆ ಬ್ಯಾನರ್ ಹಾಕುವುದು ಕಡ್ಡಾಯ. ಸಾರ್ವಜನಿಕರು ಸಹಕಾರ ನೀಡಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ನಗರಸಭೆ ಪರಿಸರ ನೈರ್ಮಲ್ಯ ಸಿಬ್ಬಂದಿ ಕಿಶನ್‌ರಾವ್ ಕುಲಕರ್ಣಿ, ಲಕ್ಷ್ಮೀಪತಿ, ಅಮರೇಶ, ಜಗದೀಶ ಇದ್ದರು.