ದುಷ್ಕರ್ಮಿಗಳನ್ನು ಗಡಿಪಾರು ಮಾಡಿ

03052020 Sindhanur Bharatiya Praja Sangh Insist
Published on

ಭಾರತೀಯ ಪ್ರಜಾ ಸಂಘ ಒತ್ತಾಯ

ಸಿಂಧನೂರು: ತಾಲೂಕಿನ ಧುಮತಿ ಗ್ರಾಮದಲ್ಲಿ ದಲಿತ ಕೇರಿಗೆ ನುಗ್ಗಿ ದುಷ್ಕರ್ಮಿಗಳ ನಡೆಸಿದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಶನಿವಾರ ಭಾರತೀಯ ಪ್ರಜಾ ಸಂಘ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವ ಮೂಲಕ ಶಿಕ್ಷೆಗೆ ಗುರಿಪಡಿಸಬೇಕು. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ವರಿಗೆ ಚಿಕಿತ್ಸೆ ಒದಗಿಸಬೇಕು. ಧುಮತಿ ಗ್ರಾಮಕ್ಕೆ ತಹಸೀಲ್ದಾರ್ ಸೇರಿ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ ಶಾಂತಿ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಯುವ ಘಟಕ ಅಧ್ಯಕ್ಷ ಬಿ.ಮುತ್ತು ಸಾಗರ, ತಾಲೂಕು ಅಧ್ಯಕ್ಷ ಶಶಿಕುಮಾರ, ನಾಗರಾಜ ಹೆಡಗಿನಾಳ, ರವಿರಾಜ ನಂಜಲದಿನ್ನಿ, ಹನುಮಂತ ಹೊಸಳ್ಳಿ, ಹೆಚ್.ಮಹೇಶಕುಮಾರ, ಉಮೇಶಬಾಲಿ, ಪಾಮಯ್ಯ ಹೊಸಳ್ಳಿ, ವಿಜಯಕುಮಾರ, ಬಸವರಾಜ ಬುಕ್ಕನಹಟ್ಟಿ, ಕೆ.ಮರಿಯಪ್ಪ, ನಾಗರಾಜ ಭಂಡಾರಿ ಇದ್ದರು.

ಮಾದಿಗ ಸಮುದಾಯ ಯುವ ವೇದಿಕೆ : ಮಾದಿಗ ಸಮುದಾಯ ಯುವ ವೇದಿಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಸಂಘಟನೆಯ ಅಮರೇಶ ಗಿರಿಜಾಲಿ, ನಾಗರಾಜ ಸಾಸಲಮರಿ, ಹುಸೇನಪ್ಪ ಶ್ರೀಪುರಂಜಕ್ಷನ್, ಈರಣ್ಣ ಸುಲ್ತಾನಪುರ, ಮಲ್ಲಿಕಾರ್ಜುನ ದೀನಸಮುದ್ರ, ಹನುಮೇಶ, ಸಂಗಮೇಶ, ಎಚ್.ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net