ತಹಸೀಲ್ದಾರ್, ತಾಪಂ ಇಒ ವಿರುದ್ಧ ಕ್ರಮವಾಗಲಿ

sdn-1
ಸಿಂಧನೂರಿನಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿಗೆ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಕರ್ನಾಟಕ ತಾಲೂಕು ಘಟಕ ಪದಾಧಿಕಾರಿಗಳು ಮನವಿ ಸಲ್ಲಿಸಲಾಯಿತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅಯ್ಯಪ್ಪ ವಕೀಲ, ಪ್ರ.ಕಾರ್ಯದರ್ಶಿ ಶರಣಪ ್ಪ ಸಾಸಲಮರಿ, ಮುಖಂಡ ನರಸಪ್ಪ ಕಟ್ಟಿಮನಿ ಇತರರಿದ್ದರು.
Published on

ಸಿಂಧನೂರು: ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಡಾ.ಅಂಬೇಡ್ಕರ್ ಅವರ ಸ್ತಬ್ಧಚಿತ್ರ ಮತ್ತು ಸಂವಿಧಾನ ಪೀಠಿಕೆಯನ್ನಿಡದೆ ನಿರ್ಲಕ್ಷಿಸಿದ ತಹಸೀಲ್ದಾರ್ ಹಾಗೂ ತಾಪಂ ಇಒ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಕರ್ನಾಟಕ ತಾಲೂಕು ಘಟಕದಿಂದ ನಗರದ ತಾಲೂಕು ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ದುಡ್ಡಿನಲ್ಲಿ ದಸರಾ ಉತ್ಸವವನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸಲಾಗಿದೆ. ಆದರೆ, ಸಂವಿಧಾನ ಪೀಠಿಕೆ ಓದದೆ ಕರ್ತವ್ಯಲೋಪ ಎಸಗಿದ್ದಾರೆ. ಎಲ್ಲೂ ಅಂಬೇಡ್ಕರ್ ಸ್ತಬ್ಧಚಿತ್ರ ಇಟ್ಟಿಲ್ಲ.

ತಳ ಸಮುದಾಯಗಳು ಮತ್ತು ದಲಿತ ಸಂಘಟನೆಗಳನ್ನು ಕಡೆಗಣಿಸಿ, ಮನೆಯ ಕಾರ್ಯಕ್ರಮದ ರೀತಿ ವರ್ತಿಸಿ ಸರ್ವಾಧಿಕಾರ ಧೋರಣೆ ತೋರಿದ್ದಾರೆ. ಆದ್ದರಿಂದ ತಹಸೀಲ್ದಾರ್, ತಾಪಂ ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಅಯ್ಯಪ್ಪ ವಕೀಲ, ಪ್ರ.ಕಾರ್ಯದರ್ಶಿ ಶರಣಪ್ಪ ಸಾಸಲಮರಿ, ಮುಖಂಡರಾದ ನರಸಪ್ಪ ಕಟ್ಟಿಮನಿ, ನಿರುಪಾದಿ ಸಾಸಲಮರಿ, ವಿರುಪಣ್ಣ ಬೂದಿವಾಲ, ದುರುಗಪ್ಪ ಮಲ್ಲಾಪುರ, ಹೊನ್ನೂರು ಕಟ್ಟಿಮನಿ, ಡಿ.ಡಿ.ದೇವರಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net