ಸಿಂಧನೂರಲ್ಲಿ ಬೆಳೆ ಹಾನಿ ಸರ್ವೇ ಕಾರ್ಯ ಚುರುಕು

Gunjalli Sector Crop Survey Work
Published on

ಸಿಂಧನೂರು: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ನಷ್ಟ ಹೊಂದಿದ್ದ ಭತ್ತದ ಬೆಳೆ ಸರ್ವೇ ಚುರುಕುಗೊಂಡಿದ್ದು, ಸ್ಥಳಕ್ಕೆ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಹಾಗೂ ಕೃಷಿ ಅಧಿಕಾರಿ ಡಾ.ಜಯಪ್ರಕಾಶ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಗುಂಜಳ್ಳಿ ಹಾಗೂ ಜಾಲಿಹಾಳ ಹೋಬಳಿಯಲ್ಲಿ ಶನಿವಾರದಿಂದ ಸರ್ವೇ ನಡೆದಿದ್ದು, ಉಳಿದ ಕಡೆಗಳಲ್ಲಿ ಕೂಡ ಸರ್ವೇ ಕಾರ್ಯ ಚುರುಕುಗೊಂಡಿದೆ. ಇನ್ನೆರಡು ದಿನಗಳಲ್ಲಿ ನಷ್ಟವಾದ ಸಂಪೂರ್ಣ ವರದಿ ತಯಾರಾಗಲಿದೆ ಎಂದು ಕೃಷಿ ಅಧಿಕಾರಿ ಡಾ.ಜಯಪ್ರಕಾಶ ತಿಳಿಸಿದರು. ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಮಾತನಾಡಿದರು. ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net