ಕ್ರಿಕೆಟ್ ಬೆಟ್ಟಿಂಗ್ ಹಾವಳಿಗೆ ಕಡಿವಾಣ ಹಾಕಿ

Untitled design 04
Published on

ಸಿಂಧನೂರು: ನಗರ ಸೇರಿ ತಾಲೂಕಿನಾದ್ಯಂತ ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಣಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ನಗರದಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಶುಕ್ರವಾರ ಮನವಿ ಸಲ್ಲಿಸಿತು.

ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಯುವಕರು, ವಿದ್ಯಾರ್ಥಿಗಳು ಈ ದಂಧೆಗೆ ನಿಂತಿದ್ದಾರೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಯುವಕರು ದಾರಿ ತಪ್ಪಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ದಂಧೆಯಿಂದ ಹಲವು ಯುವಕರು ಮನೆಗೆ ಹೋಗದೆ ಸಾಲಗಾರರಾಗಿ ಬೇರೆ ನಗರಗಳಿಗೆ ತೆರಳುವಂತಾಗಿದೆ. ಇನ್ನೂ ಕೆಲ ಯುವಕರು ಸಾಲಕ್ಕೆ ಹೆದರಿ ಲಾಡ್ಜ್‌ಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸ್ ಇಲಾಖೆಯು ಬೆಟ್ಟಿಂಗ್ ಆಡಿಸುವರ ಜತೆಗೆ ಕೈಜೋಡಿಸಿದ್ದಾರೆ. ಕೂಡಲೇ ಈ ಬಗ್ಗೆ ತಾಲೂಕು ಆಡಳಿತ ಅಗತ್ಯ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಪತ್ರ ಬರೆದು ಸೂಚನೆ ನೀಡಬೇಕು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ, ಉಪಾಧ್ಯಕ್ಷ ಎಂ.ಡಿ.ಫಾರೂಕ್, ಕಾರ್ಯದರ್ಶಿ ಶ್ರೀನಿವಾಸ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಹುಸೇನಬಾಷಾ, ಅಶೋಕ, ಶ್ರೀಧರ, ಶಿವಕುಮಾರ, ಅಮಾತೆಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net