

ಸಿಂಧನೂರು: ನಗರ ತಾಲೂಕಿನ ವಿವಿಧ ಗ್ರಾಮದಲ್ಲಿ ಶನಿವಾರ ಸಿಪಿಐಎಂಎಲ್ ಲಿಬರೇಷನ್ ಕೋಮುವಾದಿ ಬಿಜೆಪಿ ಸೋಲಿಸಿ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಿ ಪ್ರಚಾರ ಆಂದೋಲನ ಪ್ರಾರಂಭಿಸಿತು.
ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್. ಡಿ. ರೊಜೊರಿಯೊ ಮಾತನಾಡಿ, ಜನವಿರೋಧಿ, ಜನದ್ರೋಹಿ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಆಡಳಿತ ವೈಫಲ್ಯದ ವಿರುದ್ಧ ಕೊಪ್ಪಳ ಲೋಕಸಭಾ ಕ್ಷೇತ್ರದ್ಯಂತ ಚುನಾವಣಾ ಜನಜಾಗೃತಿ ಆಂದೋಲನ ನಡೆಯಲಿದೆ. ಜನಸಾಮಾನ್ಯರಲ್ಲಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಪರಸ್ಪರ ಒಡೆದಾಳುವ ಮೂಲಕ, ದೇಶದ ನೆಲ, ಜಲ, ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಲೂಟಿ ಹೊಡೆಯಲು ಮುಕ್ತ ಅವಕಾಶ ನೀಡಿರುವ ಬಿಜೆಪಿ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಸಿಪಿಐಎಂಎಲ್ ಲಿಬಿರೇಷನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ದುಡಿಯುವ ವರ್ಗದ ಬದುಕನ್ನು ದೇಶವನ್ನು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ನಿರ್ಣಾಯಕವಾಗಿ ಸೋಲಿಸಕೆಂದರು.
ಸಿಂಧನೂರು ತಾಲೂಕಿನ ಅಮರಾಪುರ, ಬೇಳಗುರ್ಕಿ ,ವೆಂಕಟೇಶ್ ಕ್ಯಾಂಪ್, ರೈತನಗರಕ್ಯಾಂಪ್, ಕಲಮಂಗಿ, ಭೋಗಪುರ, , ಗುಂಡ, ಹಲವು ಗ್ರಾಮಗಳ ಮತದಾರರಿಗೆ ಕರಪತ್ರ ವಿತರಣೆ ಮಾಡುವ ಜನಜಾಗೃತಿ ಅಭಿಯಾನ ಮೂಲಕ ಪ್ರಚಾರದಲ್ಲಿ ತೊಡಗಿದೆ ಎಂದರು.
ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಆರ್.ಎಚ್ ಕಲಮಂಗಿ, ಬಸವರಾಜ ಕೊಂಡೆ, ಚಾಂದ್ ಪಾಷಾ ಬೆಳ್ಳಿಗನೂರು, ಹನುಮಂತ ದೀನಸಮ್ರುದ ಬಸವರಾಜ ಹಿರೇದಿನ್ನಿ, ರಾಮಣ್ಮ ನಾಯಕ, ಪರುಶುರಾಮ ಭಂಡಾರಿ, ಮಹಾದೇವ, ಪಂಪಾಪತಿ ಬೆಳಗುರ್ಕಿ,ಬಸವರಾಜ ರೈತನಗರಕ್ಯಾಂಪ್, ಹನುಮಂತ ಇದ್ದರು.