ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಕುಗ್ಗಿಲ್ಲ - ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ

Uppaladoddi Congress Join
ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದಲ್ಲಿ ತಾಲೂಕು ಪಂಚಮಸಾಲಿ ಮಾಜಿ ಅಧ್ಯಕ್ಷ ವೀರನಗೌಡ ಮಾಪಾ., ಮಂಜುನಾಥಗೌಡ ಮಾಪಾ. ಹಾಗೂ ಬೆಂಬಲಿಗರು ಶಾಸಕ ಆರ್.ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
Published on

ಸಿಂಧನೂರು: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಕುಗ್ಗಿದೆ ಎನ್ನುವುದು ಸುಳ್ಳು. ಕ್ಷೇತ್ರದ ಮತದಾರರು ನಮ್ಮನ್ನು ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆ ಇದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತಾಲೂಕಿನ ಉಪ್ಪಲದೊಡ್ಡಿ ಗ್ರಾಮದಲ್ಲಿ ಸೋಮವಾರ ತಾಲೂಕು ಪಂಚಮಸಾಲಿ ಮಾಜಿ ಅಧ್ಯಕ್ಷ ವೀರನಗೌಡ ಮಾಪಾ., ಮಂಜುನಾಥಗೌಡ ಮಾಪಾ. ಹಾಗೂ ಬೆಂಬಲಿಗರು ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದರು. ಮಸ್ಕಿ ವಿಧಾನಸಭೆ ಕ್ಷೇತ್ರವು ನನ್ನ ತವರು ಕ್ಷೇತ್ರ.

ಇಲ್ಲಿನ ಜನರು ಅವರ ಮನೆ ಮಗನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಕೂಡ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿರುವೆ. ಮಾದರಿ ಕ್ಷೇತ್ರವಾಗಿಸಲು ಇನ್ನೊಂದು ಅವಕಾಶ ಕೊಡುವ ಭರವಸೆ ಇದೆ ಎಂದರು.

ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಸಿದ್ದನಗೌಡ ಮಾಟೂರು, ವೀರಭದ್ರಗೌಡ ಕಾನಿಹಾಳ, ತಾಪಂ ಮಾಜಿ ಸದಸ್ಯ ಮಲ್ಲನಗೌಡ ಗುಂಡ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಸಾಪುರ, ಬುಡ್ಡಪ್ಪ ನೇಗಲಿ, ಬಸವರಾಜ ಜುಮಲಾಪುರ, ಎಸ್ಸಿ ಘಟಕ ಜಿಲ್ಲಾ ಉಪಾಧ್ಯಕ್ಷ್ಷ ಭೀಮಣ್ಣ, ಎಸ್ಸಿ ಮುಂಚೂಣಿ ಘಟಕ ಅಧ್ಯಕ್ಷ ಹುಲುಗಪ್ಪ, ರುದ್ರಗೌಡ ಬಜೇಗೌಡ, ಚಂದ್ರಶೇಖರ ಬಳಗಾನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net