ಸಿಂಧನೂರಿನಿಂದ ಒಂದು ಸಾವಿರ ಜನ ಭಾಗಿ

13082022 basanagouda badarli
Published on

ಸಿಂಧನೂರು: ಕೆಪಿಸಿಸಿಯಿಂದ ಆ.15ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜಿನವರೆಗೆ ನಡೆಯುವ ತಿರಂಗಾ ಧ್ವಜದ ಮೆರವಣಿಗೆಯಲ್ಲಿ ಸಿಂಧನೂರಿನಿಂದ ಒಂದು ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಬೆಂಗಳೂರಿಗೆ ತೆರಳಲು 14 ಬಸ್ ಹಾಗೂ 25 ಕ್ರೂಸರ್ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಿಸುವ ಕೆಲಸ ನಡೆದಿದೆ. ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಧ್ವಜಗಳಿಗೆ ಏಕರೂಪದ ಬೆಲೆ ನಿಗದಿ ಮಾಡಿಲ್ಲ. ನಗರಸಭೆಯಲ್ಲಿ ಒಂದು ದರ ಇದ್ದರೆ, ಅಂಚೆ ಕಚೇರಿಯಲ್ಲಿ ಬೇರೆ ದರ ಇದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ ಎಬಿವಿಪಿ ಧ್ವಜವನ್ನು ಮೇಲೆ ಮಾಡಿ, ರಾಷ್ಟ್ರ ಧ್ವಜವನ್ನು ಕೆಳಗೆ ಪ್ರದರ್ಶಿಸಿರುವುದು ಅಕ್ಷಮ್ಯವಾಗಿದೆ ಎಂದರು.

ನಗರದಲ್ಲಿ ಸಿಸಿ ರಸ್ತೆಗಳ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ಶಾಸಕ ವೆಂಕಟರಾವ ನಾಡಗೌಡ ಮೌನವಾಗಿದ್ದಾರೆ. ನಿರಂತರ ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿ ಮುಗಿಸಲು ಶಾಸಕ ವಿಫಲರಾಗಿದ್ದಾರೆ. ಕಾನೂನುಬದ್ಧವಾಗಿ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ದೇವರಗುಡಿ-ಪಗಡದಿನ್ನಿ ಹಳ್ಳದ ಸೇತುವೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು. ಪ್ರಮುಖರಾದ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಖಾಜಾಸಾಬ್ ರೌಡಕುಂದ, ಶರಣಯ್ಯಸ್ವಾಮಿ ಕೋಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net