ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಲಿ

Sindhanour muncipal workers protest
ಸಿಂಧನೂರು ನಗರಸಭೆ ಕಚೇರಿ ಮುಂದೆ ಪೌರ ನೌಕರರ ಸಂಘದ ತಾಲೂಕು ಘಟಕ ಧರಣಿ ಮುಂದುವರಿಸಿದೆ. ನಗರಸಭೆೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸದಸ್ಯರಾದ ಚಂದ್ರಶೇಖರ ಮೈಲಾರ, ಸಣ್ಣ ವೀರಭದ್ರಪ್ಪ ಕುರುಕುಂದಿ ಇತರರು ಭಾಗವಹಿಸಿ ಬೆಂಬಲಿಸಿತು.
Published on

ಸಿಂಧನೂರು : ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ತಾಲೂಕು ಘಟಕ ನಗರಸಭೆ ಕಚೇರಿ ಮುಂದೆ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ ಮೂರು ದಿನ ಪೂರೈಸಿತು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡಿನರ್, ಸ್ಯಾನಿಟರಿ ಸೂಪರ್‌ವೈಜರ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಕಾಯಂ ಮಾಡಬೇಕು. ಎಲ್ಲ ನೌಕರರಿಗೆ ಎಸ್‌ಎಫ್‌ಸಿ ಮುಕ್ತನಿಧಿಯಿಂದ ವೇತನ ನೀಡಬೇಕೆಂದು ಒತ್ತಾಯಿಸಿದರು.

ನಗರಸಭೆೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸದಸ್ಯರಾದ ಚಂದ್ರಶೇಖರ ಮೈಲಾರ, ಸಣ್ಣ ವೀರಭದ್ರಪ್ಪ ಕುರುಕುಂದಿ, ಹನುಮೇಶ ಕುರುಕುಂದಿ, ಪ್ರಮುಖರಾದ ನಿರುಪಾದಿ ನಾಗಲಾಪುರ, ಬುಡ್ಡಸಾಬ್ ಕನಕಗಿರಿ, ಎಸ್.ಪಿ.ಟೈಲರ್, ಸೈಯದ್ ಆಸೀಫ್ ಭಾಗವಹಿಸಿ ಹೋರಾಟಕ್ಕೆ ಬೆಂಬಲಿಸಿದರು. ನಗರಸಭೆ ವ್ಯವಸ್ಥಾಪಕಿ ರೇಖಾ ಪಿ, ಕಂದಾಯ ನಿರೀಕ್ಷಕಿ ಮಾಧುರಿ, ಕಾನೂನು ಸಲಹೆಗಾರ ಅಬ್ದುಲ್, ಸಂಘದ ಉಪಾಧ್ಯಕ್ಷರಾದ ಶಾಂತಕುಮಾರ, ಸೈಯದ್ ಮೀರ್‌ಅಲಿ ಜಹಗೀರದಾರ್, ಕಾರ್ಯದರ್ಶಿ ಲಕ್ಷ್ಮೀಪತಿ ಗೌಡರ್, ಖಜಾಂಚಿ ಹೇಮಣ್ಣ, ಜಂಟಿ ಕಾರ್ಯದರ್ಶಿ ಡಿ. ಈರೇಶ, ಸಂಘಟನಾ ಕಾರ್ಯದರ್ಶಿಗಳಾದ ಕಿಶನ್ ರಾವ್, ಯಲಗೂರೇಶ್ವರ ಕುಲಕರ್ಣಿ, ರಾಜಾಬಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿ ಸೋಮಶೇಖರ, ಎಇಇ ಪ್ರವೀಣಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net