ಜನಪ್ರಿಯ ಯೋಜನೆಗಳ ಪ್ರಚಾರ ಮಾಡಿ

28022023 SINDHANOUR congress office inguration
Published on

ಸಿಂಧನೂರು: ಚುನಾವಣೆ ಹತ್ತಿರವಿದ್ದು, ಕಾರ್ಯಕರ್ತರು ಕಾರ್ಯತಂತ್ರಗಳನ್ನು ರೂಪಿಸಬೇಕು. ಮನೆ-ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ, ಕೊಡುಗೆಗಳು, ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಹಿಂದಿನ ಚುನಾವಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ನಗರದ 2ನೇ ವಾರ್ಡಿನಲ್ಲಿ ಸೋಮವಾರ ನಳಿನಿ ಚಂದ್ರಶೇಖರ ಅವರ ನಗರಸಭಾ ಸದಸ್ಯರ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net