ಬ್ಯಾನರ್ ಹರಿದವರನ್ನು ಬಂಧಿಸಿ

Sindhanuru Protest
ಸಿಂಧನೂರಿನಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಇರುವ ಬ್ಯಾನರ್ ಹರಿದು ಹಾಕಿದ್ದರಿಂದ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Published on

ಸಿಂಧನೂರು: ನಗರದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಇರುವ ಬ್ಯಾನರ್ ಹರಿದು ಹಾಕಿದ್ದು, ಬ್ಯಾನರ್ ಹಾಕಿದವರ ಟಾಟಾ ಏಸ್ ವಾಹನದ ಮೇಲೆ ಕಲ್ಲು ತೂರಾಡಿ ಜಖಂಗೊಳಿಸಿದ್ದರಿಂದ ಯುವಕರು ಗಂಗಾವತಿ ಸಂಪರ್ಕ ರಸ್ತೆಯಲ್ಲಿ ಮಂಗಳವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ನಗರದ ಎ.ಕೆ.ಗೋಪಾಲನಗರಕ್ಕೆ ತೆರಳುವ ಮಾರ್ಗದಲ್ಲಿ ಛತ್ರಪತಿ ಶಿವಾಜಿ ಜಯಂತಿ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಬ್ಯಾನರ್ ಹಾಕಿದ್ದ ಬಸವರಾಜ ಎನ್ನುವರ ಟಾಟಾ ಏಸ್ ವಾಹನದ ಮೇಲೆ ಕಲ್ಲು ತೂರಲಾಗಿದೆ. ಶಿವಾಜಿಯ ಭಾವಚಿತ್ರ ಇರುವ ಬ್ಯಾನರ್ ಹರಿದು ಹಾಕಿದ್ದು ಅಕ್ಷಮ್ಯ, ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net