

ಸಿಂಧನೂರು : ಚಾತುರ್ಮಾಸ್ಯ ನಿಮಿತ್ತ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥರು ಶನಿವಾರ ಅದ್ದೂರಿ ಶೋಭಾ ಯಾತ್ರೆ ಮೂಲಕ ಪುರ ಪ್ರವೇಶ ಮಾಡಿದರು.
ಶ್ರೀಗಳನ್ನು ಅಲಂಕೃತ ತೆರೆದ ವಾಹನದಲ್ಲಿ ಹಳೇ ಬಜಾರದ ಉಪ್ಪಾರವಾಡಿ ಶಾಲೆಯಿಂದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರ ದವರೆಗೆ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯರ ಭಜನೆ ಯೊಂದಿಗೆ ಮೆರವಣಿಗೆ ನಡೆಸಲಾಯಿತು. ರಸ್ತೆಯುದ್ದಕ್ಕೂ ಬಾಜಾ- ಭಜಂತ್ರಿ, ವಾದ್ಯ ಮೇಳಗಳು ಕಳೆಕಟ್ಟಿದ್ದವು. ಭಕ್ತರು ಪಟಾಕಿಗಳ ಸಿಡಿಸಿ ಸಂಭ್ರಮಿಸಿದರು. ಸಾರ್ವಜನಿಕರು ಶ್ರೀಗಳ ದರ್ಶನ ಪಡೆದರು. ತಾಲೂಕು ಬ್ರಾಹ್ಮಣ ಸಮಾಜ, ಯೋಗೀಶ್ವರ ಯಾಜ್ಞವಲ್ಕೃ ಸಮಿತಿ, ಶ್ರೀ ಶಂಕರ ಸೇವಾ ಸಮಿತಿ, ವಿಪ್ರ ನೌಕರರ ಸಂಘ, ಗಜಾನನ ಹವ್ಯಾಸಿ ಯುವಕ ಮಂಡಲ ಹಾಗೂ ಸಮಸ್ತ ಮಹಿಳಾ ಭಜನಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಕೆ.ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರ್ಕರ, ಮಠಾಧಿಕಾರಿ ನರಸಿಂಹ ಆಚಾರ್ಯ ಪುರೋಹಿತ, ಮುಖಂಡರಾದ ವೆಂಕಣ್ಣ ಆಚಾರ್ಯ ದೋಟಿಹಾಳ, ಎಂ.ಕೆ.ಗೌರ್ಕರ್, ಮನೋಹರರಾವ್ ಕುಲಕರ್ಣಿ, ನಾಗೇಂದ್ರ ಕುಮಾರ್ ಸಾಹುಕಾರ, ಪ್ರಾಣೇಶ್ ಸಿದ್ದರಾಮಪುರ, ನಾಗರಾಜ ಚನ್ನಳ್ಳಿ, ಸುಧೀಂದ್ರ ಕುಲಕರ್ಣಿ, ಪ್ರಹ್ಲಾದ ಗುಡಿ, ಪಾಂಡುರಂಗ ದೇಸಾಯಿ, ರಾಘವೇಂದ್ರರಾವ್ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ದಢೆೇಸುಗೂರು, ಶಂಕರ್ ರಾವ್, ಗುರುರಾಜ ಜಹಗೀರದಾರ್, ರಂಗನಾಥಾಚಾರ ಸಾಲ್ಗುಂದ, ವೆಂಕಟರಾವ್ (ರಾಜು)ಬಂಡಿ, ವೆಂಕಟೇಶ ಸಿದ್ದರಾಂಪುರ, ದಿನೇಶ ಹೆಬ್ಬಾಳ, ಗುಂಡೂರಾವ್ ಚನ್ನಳ್ಳಿ, ಭೀಮಸೇನಾಚಾರ್ಯ ಪುರೋಹಿತ, ವೆಂಕಟೇಶ ಆಚಾರ್ ಕೆಂಗಲ್, ವರದಾಚಾರ್, ಜಯತೀರ್ಥ ದಾಸ್, ಭೀಮಸೇನ್ ಆಚಾರ್ ನವಲಿ ಇದ್ದರು.