ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ

cyber crime
Published on

ಸಿಂಧನೂರು: ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿರುವುದು ಬುಧವಾರ ಬೆಳಗಿನ ಜಾವ ನಡೆದಿದೆ. ನಗರದ ಸಾಯಿ ಟಿಫಿನ್ ಸೆಂಟರ್‌ನ ಮಾಲಕಿ ಕೃಷ್ಣವೇಣಿ ಭಾಸ್ಕರ್ ಅವರು ಎಂದಿನಂತೆ ಬೆಳಗಿನ ಜಾವ ತಮ್ಮ ಮನೆಯಿಂದ ಪ್ರಶಾಂತನಗರದಲ್ಲಿರುವ ತಮ್ಮ ಹೋಟೆಲ್ ತೆರೆಯಲು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಆಸ್ಪತ್ರೆ ಮುಂದಿನ ರಸ್ತೆಯ ಕ್ರಾಸ್‌ಗೆ ಕೃಷ್ಣವೇಣಿ ಬರುತ್ತಿದ್ದಂತೆ ಪಕ್ಕದ ಬೇಕರಿ ಬಳಿ ನಿಂತಿದ್ದ ದುಷ್ಕರ್ಮಿಯೊಬ್ಬ ಏಕಾಏಕಿ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಕಳ್ಳ ಕಳ್ಳ ಎಂದು ಕೂಗುತ್ತಿದ್ದಂತೆ ಅಕ್ಕಪಕ್ಕದ ಮನೆಯ ಮಹಿಳೆಯರು, ಸಾರ್ವಜನಿಕರು ಬಂದು ಜಮಾಯಿಸಿದರು. ಈ ಕುರಿತು ಶಹರ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ವೀಕ್ಷಿಸಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಕಳ್ಳತನ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದರು. ಕೃಷ್ಣವೇಣಿ ಅವರು ನೀಡಿದ ದೂರಿನ ಮೇರೆಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net