

ಸಿಂಧನೂರು: ನಗರದ ಗಂಗಾವತಿ ರಸ್ತೆಯ ತುಂಗಭದ್ರಾ ಎಡದಂಡೆ ನಾಲೆಯ 40ನೇ ಉಪ ಕಾಲುವೆ ಹತ್ತಿರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಎಂಎಲ್ಸಿ ಬಸನಗೌಡ ಬಾದರ್ಲಿ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಧಾನಪರಿಷತ್ ಶಾಸಕರ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ರಡ್ಡಿ ಸಂಕ್ಷೇಮ ಸಂಘದ ಅಧ್ಯಕ್ಷ ಸತ್ಯನಗೌಡ ಒಳಬಳ್ಳಾರಿ, ಮಲ್ಲಪ್ಪ, ಸಿದ್ದರಾಮಪ್ಪ ಕಾನಿಹಾಳ, ತಿಮ್ಮಾರಡ್ಡಿ ಹುಡಾ, ನಿರುಪಾದೆಪ್ಪ ಜೋಳದರಾಶಿ, ತಿರುಮಲರೆಡ್ಡಿ, ಬಸವರಾಜ ವಕೀಲ, ಶಿವಕುಮಾರ ಜವಳಿ, ತಿಮ್ಮಣ್ಣ ಸಾಹುಕಾರ ಕುರುಕುಂದಾ, ಶರಣಯ್ಯಸ್ವಾಮಿ ಕೋಟೆ, ಮಲ್ಲನಗೌಡ ಮಲ್ಕಾಪುರ, ಮಹಾಂತೇಶ, ಜೆಡಿಎಸ್ ಮುಖಂಡ ವೀರೇಶ ನಾಡಗೌಡ, ಆದನಗೌಡ ಎಲೆಕೂಡ್ಲಿಗಿ, ಮುತ್ತು ಪಾಟೀಲ್ ಇತರರಿದ್ದರು.