ಮಹಿಳಾ ಅಭಿವೃದ್ಧಿ ಕ್ಷೇತ್ರ ವಿಸ್ತರಣೆ ಸ್ವಾಗತಾರ್ಹ

Sindhanour womens day
ಸಿಂಧನೂರಿನಲ್ಲಿ ಬಿಜೆಪಿ ಮಹಿಳಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಉದ್ಘಾಟಿಸಿದರು. ಜಂಗಮ ಸಮಾಜದ ತಾಲೂಕು ಅಧ್ಯಕ್ಷೆ ಯೋಗಿತಾ ರಾಜೇಶ ಹಿರೇಮಠ, ಪ್ರಮುಖರಾದ ವಿಜಯಲಲಕ್ಷ್ಮೀ ಕರಿಯಪ್ಪ, ನಂದಿನಿ ಎಂ., ಪ್ರೇಮಾ ಸಿದ್ಧಾಂತಿಮಠ, ಮಮತಾ ಹಿರೇಮಠ ಇದ್ದರು.
Published on

ಸಿಂಧನೂರು: ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ತನ್ನ ಶಕ್ತಿ ಸಾಬೀತುಪಡಿಸಿದ್ದಾಳೆ ಎಂದು ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಹೇಳಿದರು.

ನಗರದಲ್ಲಿ ಬಿಜೆಪಿ ನಗರ ಮಹಿಳಾ ಘಟಕದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಮಾತನಾಡಿದರು. ಪ್ರಸ್ತುತ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಬರುವ ಸಂಕಷ್ಟಗಳನ್ನು ಎದುರಿಸಿ ಗೆಲ್ಲಬೇಕು. ಮಹಿಳೆಯರು ಅಭಿವೃದ್ಧಿ ಕ್ಷೇತ್ರವನ್ನು ವಿಸ್ತರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.

ತಾಲೂಕು ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಯೋಗಿತಾ ರಾಜೇಶ ಹಿರೇಮಠ ಮಾತನಾಡಿ, ಮಹಿಳೆಯರು ಸಾಧನೆಗೆ ಪೂರಕವಾಗಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಮ್ಮ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಕಾರ್ಯದಕ್ಷತೆ ಮೆಚ್ಚುವಂಥದ್ದು ಎಂದರು.

ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಸಹನಾ ಹಿರೇಮಠ ಮಾತನಾಡಿ, ಮಹಿಳೆಯರು ಕೀಳರಿಮೆ ತೊರೆದು ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಬೇಕು. ಅಂಗಾಂಗ ದಾನಗಳ ನೋಂದಣಿಯಲ್ಲಿ ಭಾಗವಹಿಸಬೇಕು ಎಂದರು.

ಪ್ರಮುಖರಾದ ವಿಜಯಲಕ್ಷ್ಮೀ ಕರಿಯಪ್ಪ, ನಂದಿನಿ ಎಂ., ಪ್ರೇಮಾ ಸಿದ್ಧಾಂತಿಮಠ, ಮಮತಾ ಹಿರೇಮಠ, ಶೈಲಜಾ, ಸನ್ನಿಧಿ ಹಿರೇಮಠ, ಕವಿತಾ ಹಿರೇಮಠ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಮುಖಂಡರಾದ ಸುವರ್ಣ ಕೃಷ್ಣವೇಣಿ, ಅಮರಮ್ಮ, ವಂದಿತಾ ಎಂ., ನ್ಯಾಯವಾದಿ ಗೌರಮ್ಮ, ಹೇಮಲತಾ ಜೋಳದರಾಶಿ, ಮಲ್ಲಿಕಾರ್ಜುನ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net