

ಸಿಂಧನೂರು: ಸಮೃದ್ಧ ರಾಷ್ಟ್ರ ನಿರ್ಮಾಣ ಉದ್ದೇಶದಿಂದ ಬಿಜೆಪಿ ಸ್ಥಾಪನೆಯಾಗಿದ್ದು, ವಿಶ್ವದ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಶ್ರೀರಾಮ ನವಮಿ ಆಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕೆಲವು ಪಕ್ಷಗಳಿಂದ ದೇಶ ಅಧೋಗತಿಗೆ ತಲುಪುವ ಸ್ಥಿತಿಯಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ, ಮುರಳಿಮನೋಹರ ಜೋಷಿ, ಎಲ್.ಕೆ.ಆಡ್ವಾಣಿ, ಸುಷ್ಮಾ ಸ್ವರಾಜ್, ಅನಂತಕುಮಾರ, ಬಿ.ಎಸ್. ಯಡಿಯೂರಪ್ಪರಂಥ ಮಹಾನ್ ನಾಯಕರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂತು. ರಾಷ್ಟ್ರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಉತ್ತಮ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬೇರು ಮಟ್ಟದಿಂದ ಪಕ್ಷ ಸಂಘಟಿಸಲು ಸನ್ನದ್ಧರಾಗೋಣ ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ ಮಾತನಾಡಿದರು. ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಪ್ರಮುಖರಾದ ಲಿಂಗರಾಜ ಹೂಗಾರ, ನಾಗರಾಜ ದೇವರಗುಡಿ, ಜಯಶ್ರೀ ರೆಡ್ಡಿ, ಬಸವರಾಜ ಹಂಚಿನಾಳ, ಮಲ್ಲಿಕಾರ್ಜುನ ಕಾಟಗಲ್, ಶಿವಕುಮಾರ ಕುರಕುಂದಿ, ಕಾಶಿನಾಥ, ಲಕ್ಷ್ಮಣ್, ಸಿರಾಜ್ ಪಾಷಾ, ಯಲ್ಲೂಸಾ ಬದಿ, ಬಸವರಾಜ ಸಿದ್ರಾಂಪುರ ಇದ್ದರು.