

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಮೊಸರು ಗಡಿಗೆ ಒಡೆದು ಬಣ್ಣದೊಕುಳಿ ಆಡಲಾಯಿತು.
ರಾಮನವಮಿಯ ರಥೋತ್ಸವದ ಮರುದಿನ ಮಕ್ಕಳು, ವೃದ್ಧರು ಈ ಬಣ್ಣದ ಓಕುಳಿಯಲ್ಲಿ ಪಾಲ್ಗೊಳ್ಳುವ ಪ್ರತೀತಿ ಇದೆ. ದೊಡ್ಡದಾದ ಕಂಬಕ್ಕೆ ಜಾರುವ ರೀತಿ ಎಣ್ಣೆಯನ್ನು ಹಚ್ಚಿ, ಮೊಸರು ಗಡಿಗೆಯನ್ನು ಕಟಿ,್ಟ ಕಂಬ ಏರುವಾಗ ನೀರು ಎರಚುವರು, ಅದೆಲ್ಲವನ್ನು ಲೆಕ್ಕಿಸದೇ ಯುವಕರು ಏರಿ ಮೊಸರು ಗಡಿಗೆಯನ್ನು ಒಡೆಯುವ ಮನಮೋಹಕ ದೃಶ್ಯ ಗಮನ ಸೆಳೆಯಿತು. ಶ್ರೀ ರಾಮ ದೇವರ ಉತ್ಸವ ಮೂರ್ತಿಯನ್ನು ಭಜನೆ ಮುಖಾಂತರ ರಾಮ ಮಂದಿರದ ಬೀದಿಯಲ್ಲಿ ಸಾಗಿತು. ದಾರಿಯುದ್ದಕ್ಕೂ ಶ್ರೀ ರಾಮದೇವರಿಗೆ ಕಾಯಿ, ಹಣ್ಣು ಅರ್ಪಿಸಿ ಮಂಗಳಾರತಿ ನೆರವೇರಿಸಿದರು. ಶ್ರೀ ರಾಮದೇವರ ಬಣ್ಣದೊಕುಳಿಯನ್ನು ಪರಸ್ಪರರು ಎರಚಾಡಿ ಸಂಭ್ರಮಿಸಿದರು.
ಬ್ರಾಹ್ಮಣ ಸಮುದಾಯದ ಪ್ರಮುಖರಾದ ರಾಮಕೃಷ್ಣಾಚಾರ್ ಗೋನ್ವಾರ, ನರಸಿಂಹಾಚಾರ್ ಮಠಾಧಿಕಾರ್, ಗೋವಿಂದರಾವ್ ಕುಲಕರ್ಣಿ, ಸುಬ್ಬಾಶಾಸ್ತ್ರೀ, ಹನುಮೇಶಚಾರ್ ಬಾದರ್ಲಿ, ವಿಶ್ವನಾಥ ಕಲ್ಲೂರು, ರಾಜು ಬಂಡಿ ವಕೀಲ್, ಭೀಮಸೇನ ಜಾಗೀರದಾರ, ಮನೋಜ್ ಕುಲಕರ್ಣಿ, ವೆಂಕಟೇಶ ಕೆಂಗಲ್, ಪ್ರಹ್ಲಾದ ಕುಲಕರ್ಣಿ, ಪ್ರಭು ದೇಶಪಾಂಡೆ, ದಿನೇಶ ಹೆಬ್ಬಾಳ, ಆನಂದ ಗೋರ್ಕರ್, ಪ್ರಭಾಕರ ಕುಲಕರ್ಣಿ, ಅವಿನಾಶ್ ಬಂಡಿವಕೀಲ್, ವಿಜಯ್ ತಲೇಖಾನ್, ವಿಶ್ವನಾಥ ಕಲ್ಲೂರು, ವಿನಾಯಕ ಕಲ್ಲೂರು ಇತರರಿದ್ದರು.