ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಿ

Untitled design (56)
ಸಿಂಧನೂರಿನ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಮಂಗಳವಾರ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಾಮಕೃಷ್ಣ ಪ್ರಯೋಗ ಶಾಲೆಯ ಆಪ್ತ ಸಮಲೋಚಕ ಈರಣ್ಣ, ಆರೋಗ್ಯ ಸಿಬ್ಬಂದಿಗಳಾದ ವೆಂಕಟಲಕ್ಷ್ಮೀ, ಯಮುನಾ ಬಿ. ಇದ್ದರು.
Published on

ಸಿಂಧನೂರು: ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಮಂಗಳವಾರ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಸೆಂಟ್ ಲುಕ್ಸ್ ಮೆಡಿಕಲ್ ಸೊಸೈಟಿ, ಸಂಪರ್ಕ ಕಾರ್ಯಕರ್ತ ಯೋಜನೆ, ರಾಯಚೂರು, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಶ್ರೀರಾಮಕೃಷ್ಣ ಪ್ರಯೋಗ ಶಾಲೆಯ ಆಪ್ತ ಸಮಾಲೋಚಕ ಈರಣ್ಣ ಮಾತನಾಡಿ, ನರೇಗಾ ಕೆಲಸದೊಂದಿಗೆ ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಬೇಕು. ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಶಿಬಿರದಲ್ಲಿ 147 ನರೇಗಾ ಕಾರ್ಮಿಕರು ಮಧುಮೇಹ ಕಾಯಿಲೆ, ರಕ್ತದೊತ್ತಡ, ರಕ್ತ ಹೀನತೆ, ಕ್ಷಯರೋಗ, ಎಚ್‌ಐವಿ ಹಾಗೂ ಸಿಪಿಲಿಸ್ ರೋಗದ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡರು. ಆರೋಗ್ಯ ಸಿಬ್ಬಂದಿ ವೆಂಕಟಲಕ್ಷ್ಮೀ, ಯಮುನಾ ಬಿ., ಬಾನು, ಬಾಬಮ್ಮ, ವಲಯ ಮೇಲ್ವಿಚಾರಕ ರಾಯಪ್ಪ ಭಂಡಾರಿ ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net