ಭಾರತೀಯರ ಹೆಮ್ಮೆಯ ಪ್ರತೀಕ ಕಾರ್ಗಿಲ್ ಗೆಲುವು

Sindhanour Kargil day
Published on


ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಹೇಳಿಕೆ

ಸಿಂಧನೂರು: ಭಾರತ ಹಲವಾರು ಯುದ್ಧಗಳನ್ನು ಗೆದ್ದಿದೆ. ಆದರೆ, ಕಾರ್ಗಿಲ್ ಯುದ್ಧ ಐದಾರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟ-ಗುಡ್ಡಗಳ ಶೀತ ಪ್ರದೇಶದಲ್ಲಿ ನಡೆದಿದೆ. ಆದ್ದರಿಂದ ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕವಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಹೇಳಿದರು.

ನಗರದ ಟೌನ್ ಹಾಲ್‌ನಲ್ಲಿ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ ಕರ್ನಾಟಕ ತಾಲೂಕು ಘಟಕ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ವಿವಿಧ ಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಕಿಸ್ತಾನಿಯರನ್ನು ಹಿಮ್ಮೆಟ್ಟಿಸಿದ್ದ ಭಾರತೀಯ ಸೈನಿಕರು 1999ರ ಜು.24 ರಂದು ಯುದ್ಧ ಗೆದ್ದಿದ್ದರು ಎಂದರು.

ವೆಂಕಟಗಿರಿ ಕ್ಯಾಂಪಿನ ಸಿದ್ಧಾಶ್ರಮದ ಸದಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಯುವ ಮುಖಂಡ ಸುರೇಶ ಹಚ್ಚೊಳ್ಳಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸುಮಿತ್ ತಡಕಲ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ಜಿಲ್ಲಾ ಅಧ್ಯಕ್ಷ ಶಿವರಾಜ ಸಾಸಲಮರಿ, ತಾಲೂಕು ಅಧ್ಯಕ್ಷ ಪಿ.ಹುಲುಗಯ್ಯ, ಸಮಾಜ ಸೇವಕಿ ಲಕ್ಷ್ಮೀ ಪತ್ತಾರ್, ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಯ್ಯಸ್ವಾಮಿ, ತಾಲೂಕು ಅಧ್ಯಕ್ಷ ಪ್ರಕಾಶ ಗೋನವಾರ, ಕಲ್ಯಾಣ ಕರ್ನಾಟಕ ಗೌರವಾಧ್ಯಕ್ಷ ಯಂಕಯ್ಯಶೆಟ್ಟಿ, ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ್ ಕೋಟೆ ಇದ್ದರು.

ಸನ್ಮಾನ: ನಿವೃತ್ತ ಯೋಧರಾದ ವೀರೇಶ ಯಾದವ್, ಸುರೇಶ ಎಂ., ನಾಗರಾಜ ತುರ್ವಿಹಾಳ, ನರಸಿಂಹರಾವ್, ಅಮರೇಶ ಅಲಬನೂರು, ಬಸವರಾಜ ಕೋರ್ಟ್, ಈರಯ್ಯಸ್ವಾಮಿ, ಮಹಾಂತೇಶಸ್ವಾಮಿ, ಸಲೀಂ, ಮಹ್ಮದ್ ರಫಿ, ಹನುಮಂತಪ್ಪ ಕಾರಟಗಿ, ಸುಬ್ರಮಣ್ಯಂ, ಬಿಎಸ್‌ಎಫ್ ಯೋಧ ವೀರೇಶ ಕನ್ನೇರ್ ಮತ್ತಿತರರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net