ವಾಜಪೇಯಿ ಹುಟ್ಟುಹಬ್ಬ ಆಚರಣೆ

251220 Sindhanuru Vajapayee Birthday
ಮಾಜಿ ಪ್ರಧಾನಿ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ 97 ಹುಟ್ಟುಹಬ್ಬ ನಿಮಿತ್ತ ಭಾರತೀಯ ಜನತಾ ಪಾರ್ಟಿ ತಾಲೂಕು ಘಟಕ, ಒಬಿಸಿ ಮತ್ತು ಎಸ್‌ಸಿ ಮೋರ್ಚಾ ವತಿಯಿಂದ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.
Published on

ಸಿಂಧನೂರು: ಮಾಜಿ ಪ್ರಧಾನಿ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 97 ಹುಟ್ಟುಹಬ್ಬ ನಿಮಿತ್ತ ಭಾರತೀಯ ಜನತಾ ಪಾರ್ಟಿ ತಾಲೂಕು ಘಟಕ, ಒಬಿಸಿ ಮತ್ತು ಎಸ್‌ಸಿ ಮೋರ್ಚಾ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.

ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ವಾಜಪೇಯಿಯವರು ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದು, ಪ್ರಧಾನಿಯಾಗಿ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲೇ ಈಗಿನ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ವಾಜಪೇಯಿ ಹುಟ್ಟುಹಬ್ಬ ನಿಮಿತ್ತದೇಶದ 9 ಕೋಟಿ ರೈತರ ಖಾತೆ ತಲಾ 2 ಸಾವಿರ ರೂ. ಜಮಾ ಮಾಡುವ ಮೂಲಕ ರೈತ ಪರ ಎಂದು ಸಾಬೀತುಪಡಿಸಿದ್ದಾರೆ ಎಂದರು.

ಒಬಿಸಿ ರಾಜ್ಯ ಕಾರ್ಯದರ್ಶಿ ಉಮೇಶ ಸಜ್ಜನ್, ಪ್ರಕಾಶ, ಹನುಮೇಶ ಸಾಲಗುಂದಾ, ಪ್ರೇಮಾ ಸಿದ್ದಾಂತಿಮಠ, ಶಿವಬಸನಗೌಡ ಗೊರೇಬಾಳ, ವೆಂಕನಗೌಡ ಸಾಸಲಮರಿ, ಶಂಕರಾಚಾರ್, ಲಿಂಗರಾಜ ಹಲಗಿ, ಸುಬ್ಬಾರಾವ್, ಮಲ್ಲಿಕಾರ್ಜುನ ಕಾಟಗಲ್, ಶರಣು ಗೊರೇಬಾಳ, ನಿರುಪಾದಿ ಸುಕಾಲಪೇಟೆ, ಶರಣಬಸವ ಉಮಲೂಟಿ, ಹನುಮೇಶ ವಾಲೇಕಾರ್, ಶರಣಪ್ಪ ಉಮಲೂಟಿ, ಶಿವುಕುಮಾರ, ಶೇಖರ ಪತ್ತಾರ, ಅಜ್ಜು, ನಾಗರಾಜ, ಭೀಮೇಶ, ರಾಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net