ಯೂಕ್ರೇನ್‌ನಿಂದ ಹಿಂದಿರುಗುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು

07032022 Sindhanoor ukrine students comming
Published on

ಸಿಂಧನೂರು: ಯೂಕ್ರೇನ್ ದೇಶಕ್ಕೆ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ತೆರಳಿದ್ದ ನಗರದ ಇಬ್ಬರು ವಿದ್ಯಾರ್ಥಿಗಳು ಭಾನುವಾರ ನಗರಕ್ಕೆ ಆಗಮಿಸಿದರು. ಶಾಸಕ ವೆಂಕಟರಾವ ನಾಡಗೌಡ ಭಾನುವಾರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಚರ್ಚಿಸಿದರು.

ತಾಲೂಕಿನಿಂದ ಒಟ್ಟು ಐದು ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಯೂಕ್ರೇನ್‌ಗೆ ತೆರಳಿದ್ದರು. ಅವರಲ್ಲಿ ನಂದೀಶ ಬಾದರ್ಲಿ ಹಾಗೂ ಟಿ.ಲಕ್ಷ್ಮೀನಾರಾಯಣ ಸುರಕ್ಷಿತವಾಗಿ ಬಂದಿರುವುದು ಸಂತಸ ತಂದಿದೆ ಎಂದು ವೆಂಕಟರಾವ ನಾಡಗೌಡ ತಿಳಿಸಿದರು.

ಲಕ್ಷ್ಮೀನಾರಾಯಣ ಸುಮಾರು 18 ಕಿ.ಮೀ. ನಡೆದುಕೊಂಡು ಬಂದು ನಂತರ ರೈಲಿನ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿ ಭಾರತಕ್ಕೆ ಬಂದಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇನ್ನೂ ಮೂವರು ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ದಿನ ನಿಗದಿಯಾಗಿಲ್ಲ. ಶೀಘ್ರ ಅವರು ಕೂಡ ಬರುವ ನಿರೀಕ್ಷೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net