

ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣಕ್ಕೆ ಬಸ್ ಸೌಲಭ್ಯ ಒದಗಿಸಲು ಒತ್ತಾಯಿಸಿ ಕಾಲೇಜ್ ವಿದ್ಯಾರ್ಥಿಗಳು ಬುಧವಾರ ಪಟ್ಟಣಲ್ಲಿ ಬಸ್ ತಡೆದು ಪ್ರತಿಭಟಿಸಿದರು.
ತುರ್ವಿಹಾಳ ಪಟ್ಟಣದ ಸುತ್ತಲೂ 15ಕ್ಕೂ ಹೆಚ್ಚು ಹಳ್ಳಿಗಳು ಬರುತ್ತಿದ್ದು ಹಳ್ಳಿಗಳಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಪಟ್ಟಣದ ಹಾದು ಹೋಗುವ ಹುಬ್ಬಳ್ಳಿ, ಕುಷ್ಟಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ತೆರಳಲು ಸಾಧ್ಯವಾಗುತ್ತಿಲ್ಲ. ಪಟ್ಟಣಕ್ಕೆ ಒಂದೇ ಬಸ್ ಇರುವುದರಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಒಂದೇ ಬಸ್‌ನಲ್ಲಿ ಕರೆದೊಯ್ಯಲು ಆಗುತ್ತಿಲ್ಲ. ಕಾಲೇಜ್ ಸಮಯಕ್ಕೆ ಬಸ್‌ಗಳು ಇಲ್ಲದಂತಾಗಿದೆ.
ನಿತ್ಯಲೂ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಸಿಂಧನೂರು ನಗರದ ವಿವಿಧ ಕಾಲೇಜ್‌ಗಳಿಗೆ ತೆರಳು ಹರ ಸಾಹಸಪಡಬೇಕಿದೆ. ಒಂದೇ ಬಸ್‌ಗೆ ಜೋತು ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬಸ್ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಡಿಪೋ ಬಂದ್ ಮಾಡಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.