ಸಿಂಧನೂರಿನಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣ, ಮತ್ತೆ ಐವರ ಬಂಧನ

murder
Published on

ಸಿಂಧನೂರು: ನಗರದಲ್ಲಿ ಜು.11ರಂದು ನಡೆದಿದ್ದ ಒಂದೇ ಕುಟುಂಬದ ಐವರ ಹತ್ಯೆಗೆ ಸಂಬಂಧಿಸಿ ಮತ್ತೆ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಕಾಲಪೇಟೆಯಲ್ಲಿ ಒಂದೇ ಕುಟುಂಬದ ಐವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜು.12ರಂದು ಐವರನ್ನು ಬಂಧಿಸಲಾಗಿತ್ತು. ಹತ್ಯೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಆಧಾರದಲ್ಲಿ ದೊಡ್ಡಫಕೀರಪ್ಪ, ಹನುಮಂತ, ಹೊನ್ನೂರಪ್ಪ, ಅಮರೇಶ ಹಾಗೂ ಬಸವಂತಪ್ಪ ಎಂಬುವರನ್ನು ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net