ಸಿಂಧನೂರಿನ ಕೆಸರುಮಯ ರಸ್ತೆಯಲ್ಲಿ ಭತ್ತದ ಸಸಿ ಹಚ್ಚಿ ವಿನೂತನ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್ ಮುಖಂಡರು

220920 Sindhanuru On Road paddy Seeds Seeding
ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಸಿಂಧನೂರಿನ ಗಂಗಾನಗರದಲ್ಲಿ ಯುವ ಕಾಂಗ್ರೆಸ್ ತಾಲೂಕು ಘಟಕದ ಕಾರ್ಯಕರ್ತರು ಕೆಸರುಮಯ ರಸ್ತೆಯಲ್ಲಿ ಸಸಿ ಹಚ್ಚುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
Published on

ಸಿಂಧನೂರು: ನಗರದ 14ನೇ ವಾರ್ಡ್‌ನ ಗಂಗಾನಗರದಲ್ಲಿ ಯುವ ಕಾಂಗ್ರೆಸ್ ತಾಲೂಕು ಘಟಕದ ಕಾರ್ಯಕರ್ತರು ರಸ್ತೆಯ ಡಾಂಬರೀಕರಣಕ್ಕೆ ಒತ್ತಾಯಿಸಿ ಕೆಸರುಮಯ ರಸ್ತೆಯಲ್ಲಿ ಭತ್ತದ ಸಸಿ ಹಚ್ಚುವ ಮೂಲಕ ಮಂಗಳವಾರ ವಿನೂತನ ಪ್ರತಿಭಟನೆ ಮಾಡಿದರು.

ನಗರದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮಳೆಯಿಂದ ಕೆಸರುಮಯವಾಗಿ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ವಾರ್ಡ್ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಕೂಡಲೇ ಎಚ್ಚೆತ್ತುಕೊಂಡು ವಾರದೊಳಗೆ ದುರಸ್ತಿ ಕಾರ್ಯ ಮಾಡಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಶಾಮೀದ್‌ಸಾಬ, ನಾಗರಾಜ್ ಕವಿತಾಳ, ಅಮರೇಶ ಬಾಗೋಡಿ, ಹಬೀಬ್, ರಾಜುಗೌಡ, ರಹೇಮಾನ ನಾಯಕ್, ಎಂಎಲ್‌ಎ ಬುಡ್ಡಾ, ಆಸೀಫ್ ನಾಯಕ, ಹುಸೇನ್, ನಾಗರಾಜ ಮಾಡಸಿರವಾರ, ದಸ್ತಗಿರಿಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net