ಜಿಲ್ಲಾದ್ಯಂತ ಸವಿತಾ ಮಹರ್ಷಿಗೆ ನಮನ

08022022 Sindhanoor Savita Maharishi Jayanthi
Published on

ಸಿಂಧನೂರು: ಸವಿತಾ ಮಹರ್ಷಿ ಮಹಾ ತಪಸ್ವಿಗಳಾಗಿದ್ದು, ಅನೇಕ ಆರ್ಯುವೇದ ಗ್ರಂಥಗಳನ್ನು ರಚಿಸಿ ಪಾಂಡಿತ್ಯ ಮೆರೆದಿದ್ದಾರೆ. ಎಲ್ಲರಿಗೂ ಕಾಯಕ ನಿಷ್ಠೆಯ ಮಾರ್ಗ ತೋರಿದ್ದಾರೆಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ ಕಂಡ ಅನೇಕ ಮಹಾಯೋಗಿಗಳಲ್ಲಿ ಸವಿತಾ ಮಹರ್ಷಿಗಳು ಒಬ್ಬರು. ಅಂತಹ ಮಹಾನೀಯರ ಆದರ್ಶಗಳು, ಕಾಯಕವನ್ನು ಮೈಗೂಡಿಸಿಕೊಳ್ಳುವ ಮೂಲಕ ಜಯಂತಿಗಳ ಆಚರಣೆಗೆ ಅರ್ಥ ಬರುವಂತೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net