ಶೈಕ್ಷಣಿಕ ಅಭಿವೃದ್ಧಿ ಹೊಂದಲಿ; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸಲಹೆ

13122020 Sindhanoor pratibha puraskara
Published on

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಿಂಧನೂರು: ಯಾವುದೇ ಸಮುದಾಯ ಇರಲಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸಿದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಶ್ರೀ ಕನಕ ಮಂಗಲ ಭವನದಲ್ಲಿ ಭಾನುವಾರ ತಾಲೂಕು ಚನ್ನದಾಸರ ಸಮುದಾಯ ಸೇವಾ ಸಂಘ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಕಾಯಕ ಪ್ರಜ್ಞೆ ಉಳ್ಳದ್ದಾಗಿದೆ. ವೃತ್ತಿಯನ್ನು ಯಾರು ಗೌರವಿಸುತ್ತಾರೆಯೋ ಅವರು ಸಮಾಜದಲ್ಲಿ ಮುಂದೆ ಬರುತ್ತಾರೆ. ಆ ನಿಟ್ಟಿನಲ್ಲಿ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದ್ಯಾರ್ಥಿವಂತರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸರ್ಕಾರ ಸಮುದಾಯದ ಏಳ್ಗೆಗೆ ಅನೇಕ ಸವಲತ್ತು ನೀಡಬೇಕು ಎಂದರು.

ಜಿಪಂ ಸದಸ್ಯ ಬಸವರಾಜ ಹಿರೇಗೌಡ್ರ ಮಾತನಾಡಿ, ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯಬೇಕಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಂಘಟನೆಯೊಂದಿಗೆ ಪಡೆದುಕೊಳ್ಳಬೇಕು. ಸಮುದಾಯದವರು ಐಎಎಸ್, ಡಾಕ್ಟರೇಟ್ ಪದವಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರ ಮಾತನಾಡಿ, ಸಮುದಾಯ ನಡೆದು ಬಂದ ದಾರಿ ವಿವರಿಸಿ, ಸಮುದಾಯ ಸಂಘಟನೆಗೊಂಡು ಅಭಿವೃದ್ಧಿ ಸಾಧಿಸಬೇಕೆಂದರು.

ಸಮುದಾಯ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಚನ್ನದಾಸರ ಸಮುದಾಯ ಸೇವಾ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಗೊರೇಬಾಳ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಎಇಇ ವೆಂಕಟರಮಣ, ತಿಪ್ಪೇಶಪ್ಪ ದಾಸರ, ಬಿ.ಟಿ.ದಾಸರ, ಎಂ.ಎಸ್.ದಂಡಗಿ, ಸಂಜೀವಸ್ವಾಮಿ, ಶ್ರೀಧರ ಎಲ್.ದಾಸರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net