ತುಂಗಭದ್ರಾ ಪುಷ್ಕರ ಯಶಸ್ವಿಗೊಳಿಸಲು ಶಾಸಕ ವೆಂಕಟರಾವ ನಾಡಗೌಡ ಮನವಿ

15112020 Sindhanoor tungabhadra Pukshkara
Published on

ಸಿಂಧನೂರು: ತಾಲೂಕಿನ ತುಂಗಭದ್ರಾ ನದಿ ತಟದಲ್ಲಿ ನಡೆಸಲು ಉದ್ದೇಶಿಸಿರುವ ಪುಷ್ಕರ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

ತಾಲೂಕಿನ ದಢೇಸುಗೂರು ಗ್ರಾಮದಲ್ಲಿ ಭಾನುವಾರ ಪುಷ್ಕರ ನಡೆಸಲು ಉದ್ದೇಶಿಸಿರುವ ತುಂಗಭದ್ರಾ ನದಿ ದಂಡೆ ಸ್ಥಳ ವೀಕ್ಷಿಸಿ ನಂತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈಗಾಗಲೇ ಒಂದು ಸುತ್ತಿನ ಪೂರ್ವಭಾವಿ ಸಭೆ ನಡೆಸಿ, ವಿವಿಧ ಸಮುದಾಯ ಅಧ್ಯಕ್ಷರು, ಪುರೋಹಿತರೊಂದಿಗೆ ಚರ್ಚಿಸಿದ್ದೇವೆ. ನ.20 ರಿಂದ 31 ವರೆಗೆ ನಡೆಯುವ ಪುಷ್ಕರಕ್ಕೆ ಹಲವು ಸಿದ್ಧತೆ ಕೈಗೊಳ್ಳಬೇಕಿದೆ. ಕೃಷಿ ಫಾರ್ಮ್‌ನಲ್ಲೇ ಕಾರ್ಯಕ್ರಮ ಆಯೋಜಿಸುವುದು, ನದಿ ದಂಡೆಯ ಹತ್ತಿರ ವಿಶೇಷ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆಗಳು ಸಹಕರಿಸಬೇಕು ಎಂದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಡಿವೈಎಸ್‌ಪಿ ವಿಶ್ವನಾಥರಾವ ಕುಲಕರ್ಣಿ, ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net