ಸಾಧನೆಗೆ ಎನ್‌ಸಿಸಿ, ಎನ್ನೆಸ್ಸೆಸ್ ಸಹಕಾರಿ

13022022 Sindhanoor nss camp
Published on


ಸಿಂಧನೂರು: ವಿದ್ಯಾರ್ಥಿಗಳ ಸಾಧನೆಗೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‌ಸಿಸಿ ಪೂರಕ ವಾತಾವರಣ ಒದಗಿಸುತ್ತವೆ ಎಂದು ಜಾಲಿಹಾಳ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಈರಣ್ಣ ಕಮ್ಮಾರ ಹೇಳಿದರು.

ತಾಲೂಕಿನ ಜಾಲಿಹಾಳ ಸರ್ಕಾರಿ ಪಪೂ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ. ಸ್ವಚ್ಛತೆ, ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದರು. ಪ್ರಾಚಾರ್ಯ ಮುರುಡಯ್ಯ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಚಂದ್ರಶೇಖರ, ಉಪನ್ಯಾಸಕರಾದ ವಿಜಯಕುಮಾರ, ರಡ್ಡೆಪ್ಪ ಹಳ್ಳಿ, ಕಾಳಿಂಗರಡ್ಡಿ, ಡಾ.ಹುಸೇನಪ್ಪ ಅಮರಾಪುರ, ವೆಂಕಟೇಶ ಬುಕ್ಕನಹಟ್ಟಿ ಇದ್ದರು. ನಿರ್ಮಲಾ ಸ್ವಾಗತಿಸಿದರು. ಅಕ್ಷತಾ, ಲಾವಣ್ಯ ನಿರೂಪಿಸಿದರು. ಅಂಬಿಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net