18 ರಂದು ಮೃತ್ಯುಂಜಯ ಹೋಮ;ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾಹಿತಿ

15052022 Sindhanoor somanath shree
Published on

ಸಿಂಧನೂರು: ನಗರದ ಮೂರು ಮೈಲ್‌ಕ್ಯಾಂಪ್‌ನಲ್ಲಿರುವ ರಂಭಾಪುರಿ ಶಾಖಾಮಠದಲ್ಲಿ 15 ನೇ ವರ್ಷದ ಗುರು ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಅಂಗವಾಗಿ ಮೇ 18 ರಂದು ಮೃತ್ಯುಂಜಯ ಹೋಮ ಹಾಗೂ 19 ರಂದು ಯುವಕರ ಬಳಗದಿಂದ ಜಲ ಸಂರಕ್ಷಣಾ ಅಭಿಯಾನದ ಅಂಗವಾಗಿ ಮ್ಯಾರಾಥನ್ ನಡೆಯಲಿದೆಂದು ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 18 ರಂದು ಲೋಕ ಕಲ್ಯಾಣಾರ್ಥವಾಗಿ ಮಹಾ ಮೃತ್ಯುಂಜಯ ಹೋಮ ನಡೆಯಲಿದೆ. ಮೇ 19ರಂದು ಬೆಳಗ್ಗೆ 6ಕ್ಕೆ ಸ್ಥಳೀಯ ಸ್ತ್ರೀಶಕ್ತಿ ಭವನದಿಂದ ಮಠದವರೆಗೆ ಮ್ಯಾರಾಥಾನ್ ನಡೆಯಲಿದೆ ಎಂದರು.

ಶ್ರೀ ರೇಣುಕಾಚಾರ್ಯರಿಗೆ ಮಹಾರುದ್ರಾಭಿಷೇಕ, ಅಯ್ಯಚಾರ ಶಿವದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಬೈಕ್ ರ‌್ಯಾಲಿ ಮೂಲಕ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರನ್ನು ಮಠಕ್ಕೆ ಸ್ವಾಗತಿಸಲಾಗುವುದು. ನಂತರ ಪಂಚಾಚಾರ್ಯ ಧ್ವಜರೋಹಣ, ಧಾರ್ಮಿಕ ಸಮಾರಂಭ ನಡೆಯಲಿದೆ. ಸಂಜೆ ಜಗದ್ಗುರು ರೇಣುಕಾಚಾರ್ಯರ ಪಲ್ಲಕ್ಕಿ ಸೇವೆ ನಂತರ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಶಾಸಕ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ವೀರಶೈವ ಮಹಾಸಭಾ ಅಧ್ಯಕ್ಷ ಶಿವಕುಮಾರ ಜವಳಿ, ಮಲ್ಲಯ್ಯ ನವಲಿ, ಸಂತೋಷ ಅಂಗಡಿ, ಮಲ್ಲಿಕಾರ್ಜುನ ಜೀನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net