ಎಂಎಲ್‌ಸಿ ಚುನಾವಣೆ: 26 ಗ್ರಾಪಂನಲ್ಲಿ ಮಧ್ಯಾಹ್ನ 1ಕ್ಕೆ ಶೇ.100 ಮತದಾನ

101221 Sindhanuru MLC Election Voting
Published on

ಸಿಂಧನೂರು: ನಗರಸಭೆಯ 1 ಹಾಗೂ ತಾಲೂಕಿನ 30 ಗ್ರಾಪಂಗಳ ಬೂತ್‌ಗಳಲ್ಲಿ ಎಂಎಲ್‌ಸಿ ಚುನಾವಣೆ ಮತದಾನ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ನಗರಸಭೆ ಬೂತ್‌ನಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವೇಳೆಗೆ 37 ಜನ ಹಕ್ಕು ಚಲಾಯಿಸಿದರು. ಶಾಸಕ ವೆಂಕಟರಾವ ನಾಡಗೌಡ ಜೆಡಿಎಸ್ ನಗರಸಭೆ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಇನ್ನೂ 30 ಗ್ರಾಪಂ ಪೈಕಿ ನಾಲ್ಕು ಪಂಚಾಯಿತಿ ಹೊರತು 1 ಗಂಟೆ ವೇಳೆಗೆ ಶೇ.100 ರಷ್ಟು ಮತದಾನ ನಡೆದಿದೆ.

ವೀಕ್ಷಣೆ: ಸ್ಥಳೀಯ ನಗರಸಭೆ ಮತ ಕೇಂದ್ರಕ್ಕೆ ಬಿಜೆಪಿ ಎಂಎಲ್‌ಸಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಭೇಟಿ ನೀಡಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಎಲೆ ಕೂಡ್ಲಿಗಿ ಗ್ರಾಪಂ ಮತ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಪುರ ಭೇಟಿ ನೀಡಿ, ಅಧಿಕ ಮತಗಳ ಅಂತರದಿಂದ ಗೆಲ್ಲುವ ಆಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net