ಟ್ಯಾಬ್ಲೆಟ್ ದುರುಪಯೋಗ ಪಡಿಸಿಕೊಳ್ಳದಂತೆ ಬಳಸಲು ಶಾಸಕ ವೆಂಕಟರಾವ ನಾಡಗೌಡ ಕಿವಿಮಾತು

23062021 Sindhanoor Tablet distibutor
Published on

ಸಿಂಧನೂರು: ಸರ್ಕಾರ ಉಚಿತವಾಗಿ ನೀಡಿರುವ ಟ್ಯಾಬ್ಲೆಟ್‌ಗಳನ್ನು ದುರುಪಯೋಗಕ್ಕೆ ಬಳಸದೆ, ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕಾಲೇಜ್ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ 2020-21 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿ ವಿತರಣೆ ಹಾಗೂ ನಾಲ್ಕು ಬೋಧನ ಕೊಠಡಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪದವಿ ಶಿಕ್ಷಣದಲ್ಲಿ ಇತ್ತೀಚೆಗೆ ಹಲವು ತಂತ್ರಜ್ಞಾನದ ಮಾರ್ಪಾಡುಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸರ್ಕಾರಿ ಮಹಾವಿದ್ಯಾಲಯದಲ್ಲೂ ಉತ್ತಮ ಶಿಕ್ಷಣ ಸಿಗುತ್ತಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಮಹಾವಿದ್ಯಾಲಯ ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮನಾಯ್ಡು, ಎಸ್.ಬಿ.ರಡ್ಡಿ, ಸುಭಾಸ ಸಕಲೇಚಾ, ಸುವರ್ಣ ಶೇಠ್, ಮಧುಮತಿ ದೇಶಪಾಂಡೆ, ಪ್ರಾಧ್ಯಾಪಕರಾದ ಬಸವರಾಜ ತಡಕಲ್, ಖಾದರಬಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net