ಕರವಸ್ತುಗಳಿಗೆ ಮಾರುಕಟ್ಟೆ ಒದಗಿಸಿ; ತರಬೇತಿ ಸಂಸ್ಥೆಗಳಿಗೆ ಶಾಸಕ ವೆಂಕಟರಾವ ನಾಡಗೌಡ ಸಲಹೆ

17092021 Sindhanoor MLA Venkatarao nadagowda
Published on

ಗುರುತಿನ ಪತ್ರ ವಿತರಣೆ ಕಾರ್ಯಕ್ರಮ

ಸಿಂಧನೂರು: ಕುಶಲ ಕರ್ಮಿಗಳು ಸೂಕ್ತ ತರಬೇತಿ ಪಡೆದ ನಂತರ ಅವರಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಲು ತರಬೇತಿ ನೀಡಿದ ಸಂಸ್ಥೆ ಹಾಗೂ ಇಲಾಖೆಗಳು ಕ್ರಮಕೈಗೊಳ್ಳಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ನಗರದ ಮಹಿಬೂಬಿಯಾ ಕಾಲನಿಯಲ್ಲಿ ಕೇಂದ್ರ ಸರ್ಕಾರದ ಕರಕುಶಲ ಇಲಾಖೆ, ಸಾಧನ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಕರಕುಶಲ ಕರ್ಮಿಗಳಿಗೆ ಗುರುತಿನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬರೀ ತರಬೇತಿ ನೀಡಿ ಕೈಬಿಟ್ಟರೆ ಅವರ ಬದುಕಿಗೆ ಅನುಕೂಲವಾಗುವುದಿಲ್ಲ. ಅವರ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಅವಶ್ಯಕತೆಯಿದೆ ಎಂದರು.

ಕೇಂದ್ರ ಕರಕುಶಲ ಇಲಾಖೆ ಅಭಿವೃದ್ಧಿ ಅಧಿಕಾರಿ ಸುಶೀಲ್‌ಕುಮಾರ ಮಾತನಾಡಿ, ಕರಕುಶಲ ಇಲಾಖೆಯಲ್ಲಿ 72 ಕುಶಲ ಕಲೆಗಳಿದ್ದು ಇದರಲ್ಲಿ ಈ ಭಾಗದ ಜರಿಎಮ್‌ರಾಯ್ಡರಿ, ಜುವೆಲರಿ, ಲಂಬಾಣಿ ಕಸೂತಿ ಕಲೆಗಳನ್ನು ಗುರುತಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಧನ ಸಂಸ್ಥೆ ಕಾರ್ಯದರ್ಶಿ ಶರಣಪ್ಪ ಬರಸಿ ಮಾತನಾಡಿ, ಈ ಭಾಗದ ಕುಶಲ ಕರ್ಮಿಗಳು ಇಲಾಖೆಯ ಅನುಕೂಲವನ್ನು ಪಡೆದುಕೊಳ್ಳಬೇಕೆಂದರು.

ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಅಮೂಲ್ಯ ಸಾರಕ್ಷತಾ ಕೇಂದ್ರ ಸಂಸ್ಥೆದ ಸುಜಾತ, ಮೊಹಿನುದ್ದೀನ್, ಸಮಾಜ ಸೇವಕಿ ರಂಶೀನ್, ತರಬೇತಿ ಅಧಿಕಾರಿ ರಜಿಯಾಬೇಗಂ, ಖರೀಮುಲ್ಲಾ, ಮಹಿಬೂಬ ಮಿಟ್ಟಿಮನಿ, ಸಾಧನಾ ಸಂಸ್ಥೆ ಸಂಯೋಜಕ ಸುರೇಶರಡ್ಡಿ ಚೆನ್ನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net