

ಸಿಂಧನೂರು: ಶಾಸಕ ವೆಂಕಟರಾವ ನಾಡಗೌಡರಿಗೆ ಗುರುವಾರ ಕರೊನಾ ಪಾಟಿಸಿವ್ ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕರಿಗೆ ಯಾವುದೇ ರೋಗದ ಲಕ್ಷಣವಿಲ್ಲ. ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಸಂಪರ್ಕಿತರು ಪರೀಕ್ಷೆ ಮಾಡಿಕೊಳ್ಳಬೇಕು. ಸಿಂಧನೂರು ತಾಲೂಕಿನ ಜನತೆ ಅಗತ್ಯ ಕೆಲಸಗಳಿಗಾಗಿ ಸಹೋದರ ಬಸವರಾಜ ನಾಡಗೌಡರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.