ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ; ಶಾಸಕ ವೆಂಕಟರಾವ ನಾಡಗೌಡ ಹೇಳಿಕೆ

14062020 Sindhanoor Environmental Protection day
Published on

ಸಿಂಧನೂರು: ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಗಿಡಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ಸಲಹೆ ನೀಡಿದರು.

ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ಭಾನುವಾರ ಪ್ರದೇಶ ಅರಣ್ಯ ರಾಯಚೂರು ವಿಭಾಗ ಹಾಗೂ ಮಾನ್ವಿ ಪ್ರಾದೇಶಿಕ ಅರಣ್ಯ ವಲಯ ಆಶ್ರಯದಲ್ಲಿ ನಗರ ಹಸಿರೀಕರಣ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಶುದ್ಧಗೊಂಡರೆ ಜನರಿಗೆ ಉತ್ತಮ ಆಮ್ಲಜನಕ ದೊರೆತು ಜನರ ಆರೋಗ್ಯ ಸುಧಾರಿಸುತ್ತದೆ. ಇಂದು ವಾತಾವರಣದಲ್ಲಿ ಬಹಳ ಅಸಮತೋಲನವಾಗಿ ನಾಗರಿಕ ಸಮಾಜಕ್ಕೆ ಅಪಾರ ನಷ್ಟವುಂಟಾಗುತ್ತಿದ್ದು, ಇದಕ್ಕೆ ಕೊನೇ ಹಾಡಬೇಕೆಂದರು.

ಡಾ.ಚನ್ನನಗೌಡ ಆರ್.ಪಾಟೀಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಧರ್ಮನಗೌಡ ಮಲ್ಕಾಪುರ, ಮಲ್ಲಿಕಾರ್ಜುನ ವಲ್ಕಂದಿನ್ನಿ, ಅರಣ್ಯ ಅಧಿಕಾರಿ ಮುನಿಸ್ವಾಮಿ, ವನಸಿರಿ ಫೌಂಡೇಶನ್ ಜಿಲ್ಲಾಧ್ಯಕ್ಷ ಅಮರೇಗೌಡ ಮಲ್ಲಾಪುರ, ಶಂಕರಗೌಡ ಎಲೆಕೂಡ್ಲಿಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net