ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜೀವನ ಮನುಕುಲಕ್ಕೆ ಮಾದರಿ

100522 Sindhanuru Hemareddy Mallamma Jayanti
ಸಿಂಧನೂರಿನ ತಾಲೂಕು ಆಡಳಿತಸೌಧದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ರಡ್ಡಿ ಸಂಕ್ಷೇಮ ಸಂಘದ ತಾಲೂಕು ಅಧ್ಯಕ್ಷ ಸತ್ಯನಗೌಡ ಒಳಬಳ್ಳಾರಿ ಇದ್ದರು.
Published on

ಸಿಂಧನೂರು: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜೀವನ ಇಡೀ ಮನುಕುಲಕ್ಕೆ ಮಾದರಿ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು. ತಾಲೂಕು ಆಡಳಿತಸೌಧದಲ್ಲಿ ಮಂಗಳವಾರ ಹೇಮರಡ್ಡಿ ಮಲ್ಲಮ್ಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಕುಲದ ಇತಿಹಾಸದಲ್ಲೇ ಇಡೀ ಸ್ತ್ರೀಕುಲಕ್ಕೆ ಮಾದರಿಯಾಗುವಂತೆ ಬದುಕು ಸವೆಸಿ, ಕೌಟುಂಬಿಕ ಸಂಕಷ್ಟ ಮೆಟ್ಟಿ ನಿಂತು ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡು ಧಾರ್ಮಿಕ ಸಾಧನೆಗೈದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ರಡ್ಡಿ ಸಂಕ್ಷೇಮ ಸಂಘದ ತಾಲೂಕು ಅಧ್ಯಕ್ಷ ಸತ್ಯನಗೌಡ ಒಳಬಳ್ಳಾರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಅಮರೇಶ ಪಾಟೀಲ್, ಬಸವರಾಜ ಸಾಹುಕಾರ ವಕೀಲ, ವಿಶ್ವನಾಥ ಮಾಲಿ ಪಾಟೀಲ್, ನಿರುಪಾದಿ ಜೋಳದರಾಶಿ, ಮಲ್ಲಪ್ಪ, ಉಪನ್ಯಾಸಕ ನಾಗರಡ್ಡಿ ಕಲಮಂಗಿ, ಶಂಬನಗೌಡ ನಿಡಿಗೋಳ, ಸರ್ವೋತ್ತಮರಡ್ಡಿ, ಮಲ್ಲನಗೌಡ, ಸಿದ್ರಾಮಪ್ಪ ಕಾನಿಹಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net