ಆದಿಕವಿ ಮಹರ್ಷಿ ವಾಲ್ಮೀಕಿ ಮಾರ್ಗದಲ್ಲಿ ಸಾಗೋಣ: ತಹಸೀಲ್ದಾರ್ ಮಂಜುನಾಥ ಭೋಗಾವತಿ

311020 Sindhanuru Valmiki Jayanti
ಸಿಂಧನೂರು ತಹಸಿಲ್ ಕಚೇರಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
Published on

ಸಿಂಧನೂರು: ನಗರದ ತಹಸಿಲ್ ಕಚೇರಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಶನಿವಾರ ಸರಳವಾಗಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ರಾಮಾಯಣ ಎಂಬ ಪವಿತ್ರ ಗ್ರಂಥ ರಚಿಸುವ ಮೂಲಕ ಆದರ್ಶ ಪುರುಷ ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ್ದು ಮಹರ್ಷಿ ವಾಲ್ಮೀಕಿ ಆಗಿದ್ದಾರೆ. ಇಂಥ ಮಹಾನ್ ವ್ಯಕ್ತಿಯ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟು ಹಾದಿಯಲ್ಲಿ ಸಾಗಬೇಕು ತಿಳಿಸಿದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಮುಖಂಡರಾದ ಪರಮೇಶಪ್ಪ ದಢೇಸುಗೂರು, ತಿಮ್ಮಯ್ಯ ನಾಯಕ, ಕೆ.ಯಂಕೋಬ ನಾಯಕ, ಕರೇಗೌಡ ಕುರಕುಂದಿ, ಅಮರೇಶ ಗುರಿಕಾರ, ಮುನೀರ್‌ಪಾಷಾ, ಸಣ್ಣತಿಮ್ಮಯ್ಯ ಭಂಗಿ, ಶರಣಪ್ಪ ಉಪ್ಪಲದೊಡ್ಡಿ, ಆಲಂಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net