ಜೀವನದ ಉದ್ದೇಶಗಳು ಈಡೇರಲು ಪಾದಯಾತ್ರೆ ಮಾಡಲು ತಿಳಿಸಿದ ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಹೇಳಿಕೆ

Sindhanuru God Flag parade
ಸಿಂಧನೂರಿನಲ್ಲಿ 108 ಅಡಿ ಉದ್ದದ ಶ್ರೀಶೈಲ ಮಲ್ಲಿಕಾರ್ಜುಜನ ದೇವರ ಧ್ವಜದ ಮೆರವಣಿಗೆ ನಡೆಸಲಾಯಿತು.
Published on

ಸಿಂಧನೂರು: ಜೀವನದಲ್ಲಿ ಮಹತ್ವದ ಉದ್ದೇಶಗಳು ಈಡೇರಬೇಕೆಂಬ ಸಂಕಲ್ಪದೊಂದಿಗೆ ನಡೆಸುವ ಶ್ರೀಶೈಲ ಪಾದಯಾತ್ರೆ ಅತೀ ಸೂಕ್ತವಾದದ್ದಾಗಿದೆಂದು ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬೆಂಗಳೂರಿನಿಂದ ಶ್ರೀಶೈಲವರೆಗೆ ಪಾದಯಾತ್ರೆ ಕೈಗೊಂಡಿರುವ ಭಕ್ತರನ್ನು ಗುರುವಾರ ಸ್ವಾಗತ ಮಾಡಿಕೊಂಡ ಬಸನಗೌಡ ಬಾದರ್ಲಿ ಫೌಂಡೇಶನ್ 108 ಅಡಿ ಉದ್ದದ ಶ್ರೀಶೈಲ ಮಲ್ಲಿಕಾರ್ಜುಜನ ದೇವರ ಧ್ವಜದ ಮೆರವಣಿಗೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕ್ಷೇತ್ರಯಾತ್ರೆ, ತೀರ್ಥಯಾತ್ರೆಗಿಂತಲೂ ಪಾದಯಾತ್ರೆ ಅತ್ಯಂತ ಶ್ರೇಷ್ಠವಾದುದ್ದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕತೆಗೆ ಮಹತ್ವದ ಸ್ಥಾನವಿದೆ. ಬೆಂಗಳೂರಿನಿಂದ ಶ್ರೀಶೈಲವರೆಗೆ ಯುವ ಸ್ನೇಹಿತರು ಸೇರಿಕೊಂಡು ಪಾದಯಾತ್ರೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಯುವಕರು ದೈವಭಕ್ತಿ ಹೊಂದಬೇಕು ಎಂದರು.

ಬಂಗಾರಿಕ್ಯಾಂಪಿನ ಡಾ.ಸಿದ್ಧರಾಮೇಶ್ವರ ಶರಣರು ಮಾತನಾಡಿ, ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಮುಕ್ತಿಯ ಮಾರ್ಗ ತೋರಿಸುವುದಾಗಿದೆ. ಪಾದಯಾತ್ರಿಕರಿಗೆ ಅನ್ನ ದಾಸೋಹ ನೀಡುವ ಬಸನಗೌಡ ಬಾದರ್ಲಿ ಕುಟುಂಬ ನಿಜಕ್ಕೂ ಆದರ್ಶಪ್ರಾಯವಾಗಿದೆ ಎಂದರು.

ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ ಮಾತನಾಡಿದರು. ಚಿದಾನಂದಯ್ಯ ಗುರಿವಿನ್, ಸಿರಗುಪ್ಪ ಸದಾನಂದ ಸ್ವಾಮೀಜಿ, ಅಮರಯ್ಯಸ್ವಾಮಿ ಅಲಬನೂರು, ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಶ್ರೀಶಕ್ತಿ ರಕ್ತ ಭಂಡಾರ ವ್ಯವಸ್ಥಾಪಕ ಸೋಮನಗೌಡ ಬಾದರ್ಲಿ, ಶಿವಕುಮಾರ ಜವಳಿ, ಖಾಜಾ ರೌಡಕುಂದ, ಆದಿತ್ಯ ಕಾಲೇಜ್ ಪ್ರಾಚಾರ್ಯ ಕೆ.ಚಕ್ರವರ್ತಿ, ಶಾರದಾ ಕಾಲೇಜ್ ಪ್ರಾಚಾರ್ಯ ಬಸವರಾಜ ಬಾದರ್ಲಿ, ಸಹಾಯಕ ಪ್ರಾಧ್ಯಾಪಕ ವೈಜನಾಥ ಹಿರೇಮಠ, ವಿಶ್ವನಾಥ ಮಾಲಿ ಪಾಟೀಲ್, ಗುರುನಾಥ, ಎಂ.ಭಾಸ್ಕರ್, ದೊಡ್ಡಬಸವ ನಗನೂರು, ಎಚ್.ಎನ್.ಬಡಿಗೇರ, ಪ್ರಭು ದೇವರಗುಡಿ, ಶಂಕರಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಾಕ್ಷಾಯಣಿ ಗೋಮರ್ಸಿ ಇತರರು ಇದ್ದರು.

ನಗರದ ಬಸವ ವೃತ್ತದಿಂದ ಗಾಂಧಿವೃತ್ತದವರೆಗೆ 108 ಅಡಿಯ ಶ್ರೀಶೈಲ ಮಲ್ಲಿಕಾರ್ಜುನ ದೇವರ ಧ್ವಜವನ್ನು ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net