ಸಿಂಧನೂರಲ್ಲಿ ಭೂ ಸುಧಾರಣೆ ತಿದ್ದುಪಡಿ ಪ್ರತಿ, ಸುಟ್ಟು, ಅಂಗೀಕಾರದ ಪ್ರತಿ ಸುಟ್ಟು ಪ್ರಗತಿಪರ ಸಂಘಟನೆಗಳ ಆಕ್ರೋಶ

09122020 Sindhanoor formars protest
Published on

ಸಿಂಧನೂರು: ರೈತರಿಗೆ ಮಾರಕವಾದ ಭೂಸುಧಾರಣೆ ತಿದ್ದುಪಡಿ ಅಂಗೀಕಾರ ವಿರೋಧಿಸಿ ಅಂಗೀಕಾರದ ಪ್ರತಿ ಸುಟ್ಟು ಬುಧವಾರ ಗಾಂಧಿವೃತ್ತದಲ್ಲಿ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿವೃತ್ತದಲ್ಲಿ ಜಮಾಯಿಸಿದ ಪ್ರಗತಿಪರ ಸಂಘಟನೆ ಮುಖಂಡರು, ಕೇಂದ್ರ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಅಂಗೀಕಾರಕ್ಕೆ ಮುಂದಾಗಿರುವುದು ಸರಿಯಲ್ಲ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಈಗಿರುವ ಭೂಮಿಯ ಹಕ್ಕು ಕಸಿಯುವ ತಂತ್ರ ಇದರಲ್ಲಿ ಅಡಗಿದೆ. ರೈತರಿಗೆ ಭೂಮಿ ಇಲ್ಲದಂತೆ ಮಾಡಿ, ಬಂಡವಾಳಶಾಹಿಗಳ ಕೈಯಲ್ಲಿ ಭೂಮಿ ನೀಡುವ ಕುತಂತ್ರ ಅಡಗಿದೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಡಿ.ಎಚ್.ಕಂಬಳಿ, ನಾಗರಾಜ ಪೂಜಾರ, ರಮೇಶ ಪಾಟೀಲ್, ಎಸ್.ದೇವೇಂದ್ರಗೌಡ, ಬಿ.ಎನ್.ಯರದಿಹಾಳ, ಬಾಷುಮಿಯಾ, ಶ್ರೀನಿವಾಸ ಬುಕ್ಕನಹಟ್ಟಿ, ಬಸವರಾಜ ಬಾದರ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net