ಸ್ಮಶಾನ ಅತಿಕ್ರಮಣ ತೆರವುಗೊಳಿಸಿ

29012022 Sindhanoor manavi
Published on

ಸಿಂಧನೂರು: ತಾಲೂಕಿನ ಕುರುಕುಂದ ಗ್ರಾಮದಲ್ಲಿ ಅತಿಕ್ರಮಣಗೊಂಡಿರುವ ಸ್ಮಶಾನ ಭೂಮಿಯನ್ನು ತೆರವುಗೊಳಿಸಿ, ಹದ್ದುಬಸ್ತು ಮಾಡಿಕೊಡಬೇಕೆಂದು ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಗ್ರಾಮಸ್ಥರು ಶನಿವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಸರ್ವೇ ನಂ.21ರಲ್ಲಿ ಸುಮಾರು ವರ್ಷಗಳಿಂದ 3.20 ಎಕರೆ ಸ್ಮಶಾನ ಭೂಮಿ ಇದ್ದು, ಈಗ 20 ಗುಂಟೆ ಉಳಿದಿದೆ. ಉಳಿದ ಜಮೀನು ಅತಿಕ್ರಮಣಗೊಂಡಿದ್ದು, ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಹೂಳುವುದೇ ದೊಡ್ಡ ಸಮಸ್ಯೆಯಾಗಿದೆ. ತಹಸೀಲ್ದಾರ್ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಅತಿಕ್ರಮವಾಗಿರುವ ಜಮೀನನನ್ನು ವಶಪಡಿಸಿಕೊಂಡು, ಹದ್ದುಬಸ್ತು ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಮಲ್ಲನಗೌಡ ಹೊಸಮನಿ, ಗುಂಡೇಗೌಡ ಸಿಂಧನೂರು, ಶಿವಬಸನಗೌಡ ಕಾಸರಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net