ಸಮುದಾಯಗಳ ಏಳ್ಗೆಗೆಗೆ ಸರ್ಕಾರ ಸಿದ್ಧ; ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿಕೆ

18102021 Sindhanoor Hugar Madayya Jayanti
Published on


ಹೂಗಾರ ಮಾದಯ್ಯ ಜಯಂತಿ, ತಾಲೂಕು ಮಟ್ಟದ ಹೂಗಾರ ಸಮಾವೇಶ

ಸಿಂಧನೂರು: ಸಮಾಜದಲ್ಲಿ ಗುರುತಿಸಿಕೊಳ್ಳಲು ಹೂಗಾರ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಗೊಳ್ಳಬೇಕೆಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಶ್ರೀ ಕನಕದಾಸ ಕಲ್ಯಾಣ ಮಂಟಪದಲ್ಲಿ ತಾಲೂಕು ಹೂಗಾರ ಸಮುದಾಯ ಕ್ಷೇಮಾಭಿವೃದ್ಧಿ ಸಂಘ ಸೋಮವಾರ ಆಯೋಜಿಸಿದ್ದ 12 ನೇ ಶತಮಾನ ಶಿವಶರಣ ಹೂಗಾರ ಮಾದಯ್ಯ ಜಯಂತ್ಯುತ್ಸವ, ತಾಲೂಕು ಮಟ್ಟದ ಹೂಗಾರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಿಂದ ಸಮುದಾಯದ ಆಶಯಗಳು ಈಡೇರಲು ಸಾಧ್ಯ. ಈಗಾಗಲೇ ಸರ್ಕಾರ ತುಳಿತಕ್ಕೊಳಪಟ್ಟ ಸಮುದಾಯಗಳ ಏಳ್ಗೆಗೆ ಮುಂದಾಗಿದೆ. ಹೂಗಾರ ಸಮುದಾಯ ಬೇಡಿಕೆಗಳನ್ನು ನಾನು ಮತ್ತು ಶಾಸಕರು ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಸಮಾಜದ ಸುಧಾರಣೆಗೆ ಹೂಗಾರ ಸಮುದಾಯ ಶೈಕ್ಷಣಿಕವಾಗಿ ಜಾಗೃತರಾಗಬೇಕು. ಸಮುದಾಯದ ಹಿರಿಯರು ಅನುಭವಿಸಿದ ನೋವುಗಳನ್ನು ಮುಂದಿನ ಪೀಳಿಗೆ ಅನುಭವಿಸಬಾರದು ಎಂದರು. ಸಾನ್ನಿಧ್ಯ ವಹಿಸಿದ್ದ ಸೋಮನಾಥ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹೂಗಾರ ಸಮುದಾಯ ರಾಜ್ಯ ಮುಖಂಡ ಶಂಕರ ಹೂಗಾರ ಮಾತನಾಡಿದರು. ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೂಗಾರ ಮಾದಯ್ಯನವರ ಜೀವನ ಕುರಿತು ಉಪನ್ಯಾಸ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಲಿಂಗರಾಜ ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ಸಮುದಾಯ ಅಧ್ಯಕ್ಷ ಭೀಮಣ್ಣ ಹೂಗಾರ ಅಧ್ಯಕ್ಷತೆ ವಹಿಸಿದ್ದರು.

ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಸೋಮನಗೌಡ ಬಾದರ್ಲಿ, ಶಿವರಾಜ ಪಾಟೀಲ್ ಗುಂಜಳ್ಳಿ, ಸಮುದಾಯ ಹಿರಿಯ ಮುಖಂಡ ಅರವಿಂದ ಹೂಗಾರ, ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಉಗ್ರನರಸಿಂಹಪ್ಪ, ಪದಾಧಿಕಾರಿಗಳಾದ ಬಸವರಾಜ ಹೂಗಾರ, ಈರಣ್ಣ, ವೆಂಕಟೇಶ ಹೂಗಾರ, ಸಿದ್ದು ಹೂಗಾರ, ಜಡಿಯಪ್ಪ ವಕೀಲ, ಸಮುದಾಯದ ತಾಲೂಕು ಪದಾಧಿಕಾರಿಗಳಾದ ವೀರಭದ್ರಪ್ಪ ಮಾಡಸಿರವಾರ, ರವಿಕುಮಾರ ಹೂಗಾರ ಗೊರೇಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net