

ಸಿಂಧನೂರು: ಕರೊನಾ ಕಾರಣ ಹೋಳಿ ಆಚರಣೆ ನಿಷೇಧದ ನಡುವೆಯೂ ಯುವಕರು ಸೋಮವಾರ ಬಣ್ಣದಾಟದಲ್ಲಿ ಮಿಂದೆದ್ದರು. ಬೆಳಗ್ಗೆ 8 ಗಂಟೆಯಿಂದಲೇ ನಟರಾಜ ಕಾಲನಿ, ಆದರ್ಶ ಕಾಲನಿ, ಬಸವ ವೃತ್ತ, ಎಪಿಎಂಸಿ ಯಾರ್ಡ್, ಪಿಡಬ್ಲ್ಯುಡಿಕ್ಯಾಂಪ್, ಮಹಿಬೂಬಿಯಾ ಕಾಲನಿ, ಶರಣಬಸವೇಶ್ವರ ಕಾಲನಿ, ಪಟೇಲ್‌ವಾಡಿ ಮತ್ತಿತರ ಕಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಗುಂಪು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಅಲ್ಲಲ್ಲಿ ಬಾಲಕರು ಕೂಡ ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ದೊಡ್ಡವರು ಬಣ್ಣದಾಟದಲ್ಲಿ ತೊಡಗಿರುವುದು ಕಂಡು ಬರಲಿಲ್ಲ.